Mysore
25
haze

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ಚಿನ್ನಸ್ವಾಮಿ ವಡ್ಡಗೆರೆ ಕೃತಿ ʼಬಂಗಾರದ ಮನುಷ್ಯರುʼ ಎರಡನೇಯ ಮುದ್ರಣ

ಮೈಸೂರು  : ಚಿನ್ನಸ್ವಾಮಿ ವಡ್ಡಗೆರೆ ಅವರು ಬರೆದಿರುವ  ಪ್ರಯೋಗಶೀಲ ರೈತರ ಕರ್ಮ ಭೂಮಿಯಲ್ಲೇ ನಿಂತು ಅವರ ಬೇಸಾಯದ ಮಾದರಿಯನ್ನು ಅವಲೋಕಿಸಿ ಅವರ  ಅನುಭವಗಳನ್ನು ದಾಖಲಿಸಿ ಕೊಟ್ಟಿರುವ  ” ಬಂಗಾರದ ಮನುಷ್ಯರು ” ಕೃತಿಯ 2ನೇ ಮುದ್ರಣವು ಮಾರುಕಟ್ಟೆಗಳಲ್ಲಿ ಲಭ್ಯವಿದೆ.

ಈ ಕೃತಿ ಕನ್ನಡದ ಒಂದು ವಿಶಿಷ್ಟ ,ಅನನ್ಯ ಕೃಷಿ ಕೈಪಿಡಿಯಾಗಿದ್ದು, 18 ಜನ ಒಣಭೂಮಿ ಬೇಸಾಯಗಾರರು, 31 ಜನ ತೋಟಗಾರಿಕೆ ಹಾಗೂ ಕಾಡು ಕೃಷಿಯ ಬಗ್ಗೆ, 10 ಜನ ರೇಷ್ಮೆ ಮತ್ತು ಹೈನುಗಾರಿಕೆ ಕೃಷಿಯ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಒಟ್ಟು 59 ವಿಶಿಷ್ಟ ಮಾದರಿಯ ಕೃಷಿ ಪದ್ಧತಿಗಳನ್ನು ಬಂಗಾರದ ಮನುಷ್ಯರು ಕೃತಿ ದಾಖಲಿಸಿದೆ. ಯಾರೇ ಈ ಪುಸ್ತಕವನ್ನು ಓದಿದರು ಅವರಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡುವುದು ,ನಾವೂ ಕೃಷಿ ಕ್ಷೇತ್ರದ ಕಡೆಗೆ ಮುನ್ನಗ್ಗಬೇಕು ಎಂಬ ಹಂಬಲ ಮೂಡಿಸುವುದು ಈ ಗ್ರಂಥದ ವೈಶಿಷ್ಟ್ಯ. ಕೃಷಿ ಸಾಹಿತ್ಯದಲ್ಲೇ ಅಪರೂಪ ಎನ್ನಬಹುದಾದ ಮಾಹಿತಿಗಳನ್ನು ಒಳಗೊಂಡಿರುವ “ಬಂಗಾರದ ಮನುಷ್ಯರು” ಪ್ರತಿಯೊಬ್ಬ ಪ್ರಯೋಗಶೀಲ ಯುವ ರೈತನ ಮನೆಯಲ್ಲಿರಬೇಕಾದ ಸಂಗಾತಿ ಎನ್ನಬಹುದಾಗಿದೆ.
ಪುಸ್ತಕದ ಪ್ರತಿಗಳಿಗಾಗಿ ಅಭಿರುಚಿ ಗಣೇಶ್ 99805 60013 ಸಂಪರ್ಕಿಸಬಹುದಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ