Mysore
21
overcast clouds

Social Media

ಮಂಗಳವಾರ, 23 ಜೂನ್ 2026
Light
Dark

ಲೇಖಕಿ ಚಂಪಾ ಶಿವಣ್ಣರ ಭಾವಗೀತೆಗಳ ಅಡಕ ಮುದ್ರಿಕೆ “ಅವ ನಕ್ಕಾಗ” ಲೋಕಾರ್ಪಣೆ

ಮೈಸೂರು :  ಕವಯತ್ರಿ ಲೇಖಕಿ ಚಂಪಾ ಶಿವಣ್ಣ ಅವರು ರಚಿಸಿರುವ ಭಾವಗೀತೆಗಳ ಅಡಕ ಮುದ್ರಿಕೆ ಲೋಕಾರ್ಪಣೆ ಸಮಾರಂಭವನ್ನು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಾಹಿತ್ಯ ಕಲಾ ಕೂಟದ ಸಂಯುಕ್ತ ಆಶ್ರಯದಲ್ಲಿ ವಿಜಯನಗರದಲ್ಲಿರುವ ಜಿಲ್ಲಾ ಸಾಹಿತ್ಯ ಭವನದಲ್ಲಿ ಏರ್ಪಡಿಸಲಾಗಿತ್ತು “ಅವ ನಕ್ಕಾಗ” ಭಾವಗೀತೆಗಳ ಅಡಕ ಮುದ್ರಿಕೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಶ್ರೀ ಮಡ್ಡೀಕೆರೆಗೋಪಾಲ್ ಅವರು ಬಿಡುಗಡೆಗೊಳಿಸಿದರು.
ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಕಲಾ ಕೂಟದ ಅಧ್ಯಕ್ಷರಾದ ಎಂ.ಚಂದ್ರಶೇಖರ್ ಸಂಗೀತ ಸಂಯೋಜಕರಾದ ಶ್ರೀಮತಿ ಸುನೀತಾಚಂದ್ರಕುಮಾರ್ ಸ್ವರಸಾಗರ ಮ್ಯೂಸಿಕ್ ಫೌಂಡೇಶನ್ನ ಡಿ.ಎನ್.ರಾಘವೇಂದ್ರ ಹಾಗೂ ಮತ್ತೊಬ್ಬ ಸಂಗೀತ ಸಂಯೋಜಕ ಮತ್ತು ಗಾಯಕ ಜುಬಿನ್ ಪೌಲ್ ಉಪಸ್ಥಿತರಿದ್ದರು ನಂತರ ರಘು ಲೀಲಾ ಸಂಗೀತ ಮಂದಿರದ ವಿದ್ಯಾರ್ಥಿಗಳಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!