ಚಾಮರಾಜನಗರ: ಜಿಲ್ಲೆಯಾದ್ಯಂತ ಮುಂಜಾನೆಯಿಂದಲೇ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗೊಂಡಿದೆ.
ಯಳಂದೂರು ತಾಲ್ಲೂಕಿನ ಚಂಗಚಹಳ್ಳಿ ಗ್ರಾಮದ ಮಲ್ಲಿಕಾರ್ಜುನಯ್ಯ, ಮಹದೇವಮ್ಮ, ಮಹದೇವಸ್ವಾಮಿ, ಗೌರಮ್ಮ, ಕುರುಡು ರಂಗಯ್ಯ ಅವರ ಮನೆಗಳಿಗೆ ಮನೆ ನೀರು ನುಗ್ಗಿದ್ದು ನಿವಾಸಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮದ ಕೃಷ್ಣಮೂರ್ತಿ ಅವರು ಆಂದೋಲನಕ್ಕೆ ಮಾಹಿತಿ ನೀಡಿದ್ದಾರೆ.
ಚಾ.ನಗರ ತಾಲ್ಲೂಕಿನ ಇರಸವಾಡಿ ಗ್ರಾಮದ ರಸ್ತೆಗಳಲ್ಲಿ ಮಳೆನೀರು ಕೆರೆಯಂತಾಗಿದ್ದು ಸಾಕಷ್ಟು ಮನೆಗಳಿಗೆ ನೀರು ನುಗ್ಗಿ ಅವಾಂತರವಾಗಿದೆ ಎಂದು ಇರಸವಾಡಿ ಗ್ರಾಮದ ಪ್ರಸನ್ನ ಅವರು ಮಾಹಿತಿ ನೀಡಿದ್ದಾರೆ.