ಹನೂರು: ಚಿರತೆ ಉಗುರು, ಹಲ್ಲುಗಳನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿದಳವು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ ಹನೂರು ತಾಲೂಕಿನ ಜಲ್ಲಿಪಾಳ್ಯ ಗ್ರಾಮದಲ್ಲಿ ನಡೆದಿದೆ. ಬಂಧಿತರಿಂದ 18 ಚಿರತೆ ಉಗುರು, 8 ಹಲ್ಲು ವಶಗಳನ್ನು ವಶ್ಪ18 ಚಿರತೆ ಉಗುರು, 8 ಹಲ್ಲು ಗಳನ್ನು ವಶಡಿಸಿಕೊಳ್ಳಲಾಗಿದೆ.
ತಮಿಳುನಾಡು ಮೂಲದ ಜವರಯ್ಯ(52), ಕೆಂಪ(55), ತಮ್ಮಯ್ಯ(45) ಬಂಧಿತ ಆರೋಪಿಗಳು. ಚಿರತೆ ಉಗುರುಗಳಿಗೆ ಕಾಳಸಂತೆಯಲ್ಲಿ ಭಾರೀ ಬೇಡಿಕೆ ಇದೆ ಎಂಬ ತಪ್ಪು ತಿಳುವಳಿಕೆ ಹಾಗೂ ಹಲ್ಲು, ಉಗುರುಗಳಿಂದ ತಾಯತ ಮಾಡಿಕೊಂಡರೇ ಒಳಿತಾಗಲಿದೆ ಎಂಬ ಮೂಢನಂಬಿಕೆಯಿಂದ ಈ ಕೃತ್ಯ ಎಸಗಿದ್ದಾರೆ ಎಂದು ವಿಚಾರಣೆಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಇನ್ನು, ಓರ್ವ ಆರೋಪಿ ಪರಾರಿಯಾಗಿದ್ದು ಚಿರತೆ ಬೇಟೆಯಾಡಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.