Mysore
24
overcast clouds

Social Media

ಶುಕ್ರವಾರ, 18 ಏಪ್ರಿಲ 2025
Light
Dark

ವಾಹನ ಪಲ್ಟಿ- ಓರ್ವ ಸಾವು;ಹಲವರಿಗೆ ಗಾಯ

ಚಾಮರಾಜನಗರ: ಪಿಕಪ್ ವಾಹನ ಪಲ್ಟಿಯಾಗಿ ಓರ್ವ ಮೃತಪಟ್ಟು10 ಮಂದಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಬಾಣಹಳ್ಳಿ ಬಳಿ ಶುಕ್ರವಾರ ಸಂಜೆ ಸಂಭವಿಸಿದೆ.

ಯಳಂದೂರು ತಾಲ್ಲೂಕು ಹೊನ್ನೂರು ಗ್ರಾಮದ ಪ್ರಕಾಶ್(43) ಮೃತಪಟ್ಪವರು.ಗಾಯಾಳು ಗಳೂ ಇದೇ ಗ್ರಾಮದವರೆಂದು ತಿಳಿದು ಬಂದಿದೆ.
ಗಾರೆಕೆಲಸ ಮುಗಿಸಿಕೊಂಡು ಮೈಸೂರಿನಿಂದ ಹೊನ್ನೂರು ಗ್ರಾಮಕ್ಕೆ ವಾಪಸ್ಸಾಗುವಾಗ ಮಾರ್ಗಮಧ್ಯದಲ್ಲಿ ಘಟನೆ ಸಂಭವಿಸಿದ್ದು ರಸ್ತೆ ಬದಿಯ ಹಳ್ಳಕ್ಕೆ ವಾಹನ ಉರುಳಿ ಬಿದ್ದಿದೆ.
ಗಾಯಾಳುಗಳನ್ನು ಚಾ.ನಗರ ಸಿಮ್ಸ್, ಯಳಂದೂರು ಹಾಗೂ ಸಂತೇಮರಹಳ್ಳಿ ಸಾರ್ವಜನಿಕಆಸ್ಪತ್ರೆಗೆ ದಾಖಲಿಸಸಲಾಗಿದೆ. ಸಂತೇಮರಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ