Mysore
23
haze

Social Media

ಮಂಗಳವಾರ, 16 ಡಿಸೆಂಬರ್ 2025
Light
Dark

ಬಂಡೀಪುರದಲ್ಲಿ ವ್ಯಕ್ತಿ ಮೇಲೆ ಕಾಡಾನೆ ಡೆಡ್ಲಿ ಅಟ್ಯಾಕ್

elephant

ಗುಂಡ್ಲುಪೇಟೆ: ಬಂಡೀಪುರ ರಸ್ತೆಯಲ್ಲಿ ಕೇರಳ ಮೂಲದ ಪ್ರವಾಸಿಗನೊಬ್ಬ ಹುಚ್ಚಾಟ ಮೆರೆದಿದ್ದು, ಆನೆ ದಾಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾನೆ.

ಬಂಡೀಪುರ-ಕೆಕ್ಕನಹಳ್ಳ ಚೆಕ್‌ಪೋಸ್ಟ್‌ ನಡುವಿನ ಕಾಡಿನ ರಸ್ತೆಯಲ್ಲಿ ಪ್ರಯಾಣಿಕನೊಬ್ಬ ಕಾಡಾನೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ವಾಹನದಿಂದ ಇಳಿದಿದ್ದಾನೆ.

ಈ ವೇಳೆ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಒಂಟಿಸಲಗ ರೊಚ್ಚಿಗೆದ್ದಿದ್ದು, ಆತನನ್ನು ಅಟ್ಟಾಡಿಸಿಕೊಂಡು ಹೋಗಿದೆ.

ಓಡುತ್ತಿದ್ದ ವ್ಯಕ್ತಿ ಎಡವಿ ಬಿದ್ದಾಗ ಆತನನ್ನು ಒಂಟಿಸಲಗ ತುಳಿದಿದೆ. ಅದೃಷ್ಟವಶಾತ್‌ ಆತ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

Tags:
error: Content is protected !!