Mysore
15
broken clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಚಾಮರಾಜನಗರ: ಪಾರ್ವತಿ ಬೆಟ್ಟದ ಬಳಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಚಾಮರಾಜನಗರ: ಹನೂರು ತಾಲ್ಲೂಕಿನ ಚಂಗವಾಡಿ ಗ್ರಾಮದ ಬಳಿಯಿರುವ ಶ್ರೀ ಪಾರ್ವತಿ ಬೆಟ್ಟದ ಸಮೀಪ ಕೊಳೆತ ಸ್ಥಿತಿಯಲ್ಲಿರುವ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

ಸುಮಾರು 30-35 ವರ್ಷ ವಯೋಮಿತಿಯ ಮೃತನ ಎದೆಯ ಮೇಲೆ ನಂದ ಹಾಗೂ ವಿವೇಕ ಎಂಬ ಹಚ್ಚೆಯಿದೆ. ನೀಲಿ ಮತ್ತು ಕಪ್ಪು ಬಣ್ಣದ ಅಂಗಿ ಹಾಗೂ ನೀಲಿ ಬಣ್ಣದ ಜೀನ್ಸ್‌ ಪ್ಯಾಂಟನ್ನು ಧರಿಸಿದ್ದಾರೆ.

ಈ ಸಂಬಂಧ ಹನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪರಿಚಿತನ ಪತ್ತೆಗೆ ಪೊಲೀಸರು ಪ್ರಯತ್ನ ಮಾಡುತ್ತಿದ್ದಾರೆ.

 

Tags:
error: Content is protected !!