Mysore
30
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಗುಂಡ್ಲುಪೇಟೆ| ಪ್ರತ್ಯೇಕ ಸ್ಥಳಗಳಲ್ಲಿ ಬೋನಿಗೆ ಸೆರೆಯಾದ ಎರಡು ಚಿರತೆಗಳು: ಗ್ರಾಮಸ್ಥರು ನಿರಾಳ

ಗುಂಡ್ಲುಪೇಟೆ: ಕಳೆದ ಕೆಲ ದಿನಗಳಿಂದ ಉಪಟಳ ನೀಡುತ್ತಿದ್ದ ಚಿರತೆಗಳು ಎರಡು ಪ್ರತ್ಯೇಕ ಸ್ಥಳಗಳಲ್ಲಿ ಬೋನಿಗೆ ಸೆರೆಯಾಗಿದ್ದು, ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಗುಂಡ್ಲುಪೇಟೆ ತಾಲ್ಲೂಕಿನ ಹೊಂಗಳ್ಳಿ ಮತ್ತು ಅಕ್ಕಲಪುರ ಗ್ರಾಮಗಳಲ್ಲಿ ಚಿರತೆಗಳು ಕಳೆದ ಕೆಲ ದಿನಗಳಿಂದ ಜಾನುವಾರುಗಳನ್ನು ತಿಂದು, ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದ್ದವು.

ಚಿರತೆ ದಾಳಿಯಿಂದ ಭಯಭೀತರಾಗಿದ್ದ ಗ್ರಾಮಸ್ಥರು ಅವುಗಳನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.

ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ತಾಲ್ಲೂಕಿನ ಹೊಂಗಳ್ಳಿ ಹಾಗೂ ಅಕ್ಕಲಪುರ ಗ್ರಾಮದಲ್ಲಿ ಬೋನುಗಳನ್ನು ಅಳವಡಿಸಿದ್ದರು.

ಇಂದು ಈ ಎರಡು ಬೋನುಗಳಿಗೆ ಚಿರತೆಗಳು ಸೆರೆಯಾಗಿದ್ದು, ಎರಡೂ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಬೋನಿನಲ್ಲಿ ಸೆರೆಯಾದ ಚಿರತೆಗಳನ್ನು ಬಂಡೀಪುರದ ಮೂಲೆಹೊಳೆ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:
error: Content is protected !!