ಕೊಳ್ಳೇಗಾಲ: ಅಕ್ರಮವಾಗಿ ಪಿಸ್ತೂಲ್ ಮತ್ತು 10 ಸಜೀವ ಗುಂಡುಗಳನ್ನು ಹೊಂದಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಕಲ್ಯಾಣಗಿರಿಯ ನಿವಾಸಿ ತೌಫೀಕ್ ಅಹಮ್ಮದ್ ಮತ್ತು ಯಳಂದೂರು ತಾಲ್ಲೂಕಿನ ಮಾಂಬಳ್ಳಿ ಗ್ರಾಮದ ನಿವಾಸಿ ಮಹಮ್ಮದ್ ಅರ್ಷದ್ ಉಲ್ಲಾ ಬಂಧಿತರು.
ಇವರನ್ನು ವಿಚಾರಣೆಗೆ ಒಳಪಡಿಸಿದಾಗ ನನಗೆ ಪರಿಚಯಸ್ಥನಾದ ಜಾರ್ಖಂಡ್‌ನ ಪೇಂಟರ್ ಒಬ್ಬ ಇದನ್ನು ಕೊಟ್ಟಿದ್ದು, 1 ಲಕ್ಷ ರೂ.ಗೆ ಮಾರಾಟ ಮಾಡಿ ನನಗೆ 60 ಸಾವಿರ ರೂ. ಕೊಡಿ ಎಂದು ತಿಳಿಸಿದ್ದ ಎಂದು ತಪ್ಪು ಒಪ್ಪಿಕೊಂಡಿದ್ದಾರೆ.
ಈ ಸಂಬಂಧ ಅಗರ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿಗೆ:- ಆಂದೋಲ ಪುರವಣಿ ಪುಟಕ್ಕೆ ಈ ಲಿಂಕ್ ಬಳಸಿ
ದಾಳಿಯಲ್ಲಿ ಡಿವೈಎಸ್ಪಿ ಉಪ ವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿ, ಎಎಸ್‌ಐ ತಕೀವುಲ್ಲಾ, ಹೆಚ್.ಸಿ. ಕಿಶೋರ್, ವೆಂಕಟೇಶ್, ಬಿಳಿಗೌಡ, ಮುಖ್ಯಪೇದೆ ರವಿ ಕುಮಾರ್, ಪೇದೆ ಶಿವಕುಮಾರ ಭಾಗವಹಿಸಿದ್ದರು.





