Mysore
21
overcast clouds

Social Media

ಬುಧವಾರ, 09 ಜುಲೈ 2025
Light
Dark

ನಂದೀಶ್‌ ಸಾವಿನ ಪ್ರಕರಣವನ್ನು ಸಿಒಡಿಗೆ ಒಪ್ಪಿಸಿ: ತಾಲೂಕು ವೀರಶೈವ ಮಹಾಸಭಾ ಆಗ್ರಹ

ಕೊಳ್ಳೇಗಾಲ: ನಗರದ ಲಿಂಗಣಾಪುರ ಬಡಾವಣೆ ನಿವಾಸಿ ನಂದೀಶ್ ಸಾವು ಸಹಜವಲ್ಲ ಅದು ಕೊಲೆ ಎಂದು ಆರೋಪಿಸಿರುವ ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ಮಹದೇವ ಪ್ರಸಾದ್‌ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕೊಳ್ಳೇಗಾಲದಲ್ಲಿ ಸರ್ವ ಸಮುದಾಯದ ಜನರು ಸಹಬಾಳ್ವೆಯಿಂದ ಬದುಕುತ್ತಿದ್ದಾರೆ. ಹೀಗಿರುವಾಗ ಕೊಲೆ ಮಾಡಿ ಜಾತಿ ಜಾತಿಗಳ ನಡುವೆ ಸಂಘರ್ಷವಾಗುವಂತಹ ವಾತಾವರಣ ಸೃಷ್ಟಿ ಮಾಡಿರುವ ಆರೋಪಿಗಳಾದ ನಿತಿನ್, ಅಕ್ಷಯ್, ಕೌಶಿಕ್ ಹಾಗೂ ಅನುಷಾ ಎಂಬ ನಾಲ್ವರ ವಿರುದ್ಧ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು, ತಕ್ಷಣವೇ ಆರೋಪಿಗಳನ್ನು ಬಂಧಿಸಿ ಕಾನೂನು ರಿತ್ಯಾ ಕ್ರಮ ಕೈಗೊಳ್ಳಬೇಕು. ಈ ಮೂಲಕ ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಬೇಕು ಅಂತ ಒತ್ತಾಯಿಸಿದರು.

ಇನ್ನು ಈ ಪ್ರಕರಣದಲ್ಲಿ ಪೋಲಿಸರು ಸರಿಯಾದ ತನಿಖೆ ಮಾಡಿ ನ್ಯಾಯ ದೊರಕಿಸಿಕೊಡುತ್ತಾರೆಂಬ ನಂಬಿಕೆ ಇಲ್ಲದಾಗಿದ್ದು ನಂದೀಶ್ ಸಾವಿನ ಪ್ರಕರಣವನ್ನು ಸಿ.ಓ ಡಿ ತನಿಖೆಗೆ ವಹಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.

ಜಿಲ್ಲಾ ವೀರಶೈವ ಮಹಾಸಭಾದ ಉಪಾಧ್ಯಕ್ಷ ಪುಟ್ಟಣ್ಣ ಪ್ರಧಾನ ಕಾರ್ಯದರ್ಶಿ ಬಸವರಾಜು. ಸಂಚಾಲಕ ಇಂದ್ರೇಶ್ . ಚಾಮುಲ್ ನಿರ್ದೇಶಕ ಮಧುವನಹಳ್ಳಿ ನಂಜುಂಡಸ್ವಾಮಿ. ವೀರಶೈವ ಮುಖಂಡರಾದ ಮಹೇಶ್ ರುದ್ರಸ್ವಾಮಿ ಪ್ರದೀಪ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!