ಚಾಮರಾಜನಗರ : ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ವನ್ಯಜೀವಿ ವಿಭಾಗದ ಹೂಗ್ಯ ವಲಯದಲ್ಲಿ ಅಸಹಜ ಸಾವನ್ನಪ್ಪಿದ್ದ ಐದು ಹುಲಿಗಳನ್ನು ಎನ್‌ಟಿಸಿಎ ಆದೇಶದ ಅನ್ವಯ ಮೃತಪಟ್ಟ ಸ್ಥಳದಲ್ಲೇ ಅಂತ್ಯಕ್ರಿಯೆ ನಡೆಸಲಾಯಿತು.
ಶುಕ್ರವಾರ ಬೆಳಿಗ್ಗೆ ಎಪಿಸಿಸಿಎಫ್ ಶ್ರೀನಿವಾಸ್, ಸಿಸಿಎಫ್ ಹೀರಲಾಲ್, ಎನ್‌ಟಿಸಿಎ ಪ್ರತಿನಿಧಿ ಸಂಜಯ್ ಗುಬ್ಬಿ, ಮಲ್ಲೇಶಪ್ಪ, ಡಿಸಿಎಫ್ ಚಕ್ರಪಾಣ ಸಮ್ಮುಖದಲ್ಲಿ ಪಂಚನಾಮೆ ನಡೆಸಿದ ಬಳಿಕ ಅಂತ್ಯಕ್ರಿಯೆ ನಡೆಸಲಾಯಿತು.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಹುಲಿಗಳ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು. ಬಳಿಕ ಅರಣ್ಯ ಇಲಾಖೆ ನಿರ್ಲಕ್ಷ್ಯದ ಬಗ್ಗೆ ಪ್ರಶ್ನೆ ತೂರಿಬಂದಿದ್ದಕ್ಕೆ ಗರಂ ಆದನ ಸಚಿವರು, ಸಮರ್ಪಕ ಉತ್ತರ ಕೊಡದೇ ವರದಿ ಬಂದ ಬಳಿಕ ಉತ್ತರವೆಂದು ಸಚಿವರು ಹೊರಟರು.





