ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಗುಂಡ್ಲುಪೇಟೆ ತಾಲ್ಲೂಕಿನ ಅಣ್ಣೂರು ಕೇರಿ ಗ್ರಾಮದ ಸಮೀಪ ಹುಲಿಯ ಚಲನವಲನ ಕಂಡುಬಂದಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಗ್ರಾಮದ ಕೂಗಳತೆ ದೂರದಲ್ಲಿ ಹುಲಿಯು ಕಾಡುಹಂದಿಯನ್ನು ಬೇಟೆಯಾಡಿ ಅರ್ಧ ತಿಂದು ಬಿಟ್ಟು ಹೋಗಿದೆ. ಗ್ರಾಮದ ಸಮೀಪದಲ್ಲೇ ಇರುವ ಬಾಳೆಕಟ್ಟೆ ಎಂಬಲ್ಲಿ ದಟ್ಟ ಪೊದೆಯೊಂದರಲ್ಲಿ ಅಡಗಿದ್ದ ಹುಲಿಯನ್ನು ಯುವಕನೋರ್ವ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಹುಲಿ ಸೆರೆಗೆ ಗ್ರಾಮದ ಎರಡು ಕಡೆ ಬೋನು ಅಳವಡಿಸಿದ್ದಾರೆ.





