Mysore
28
broken clouds

Social Media

ಸೋಮವಾರ, 13 ಏಪ್ರಿಲ 2026
Light
Dark

ಜಮೀನಿನಲ್ಲಿ ಹುಲಿ ಪ್ರತ್ಯಕ್ಷ : ಸೋಮಹಳ್ಳಿ ಗ್ರಾಮಸ್ಥರಲ್ಲಿ ಆತಂಕ

ಗುಂಡ್ಲುಪೇಟೆ : ತಾಲ್ಲೂಕಿನ ಸೋಮಹಳ್ಳಿ ಬೇಗೂರು ರಸ್ತೆಯ ಬದಿಯ ಜಮೀನಿನಲ್ಲಿ ಭಾರೀ ಗಾತ್ರದ ಹುಲಿಯೊಂದು ಕಾಣಿಸಿಕೊಂಡಿದ್ದು, ರಸ್ತೆಯಲ್ಲಿ ಸಂಚರಿಸುತ್ತಿದ್ದವರು ನೋಡಿ ಕೂಗಿಕೊಂಡಾಗ ಓಡಿಹೋಗಿದೆ.

ಹುಲಿ ಅಲ್ಲಿಂದ ಓಡಿಹೋಗುವ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದು ಸಾಮಾಜಿಕ ಜಾಕತಾಣದಲ್ಲಿ ಹರಿಯಬಿಟ್ಟಿದ್ದಾರೆ. ಹುಲಿ ಪ್ರತ್ಯಕ್ಷವಾಗಿದ್ದರಿಂದ ಸೋಮಹಳ್ಳಿ ಗ್ರಾಮಸ್ಥರಲ್ಲಿ ಆತಂಕ ಎದುರಾಗಿದೆ.

ಸೋಮಹಳ್ಳಿ, ಹಕ್ಕಲಪುರ, ಪಡಗೂರು, ಸಂಪಿಗೆಪುರ ಸೇರಿದಂತೆ ಅನೇಕ ಭಾಗದಲ್ಲಿ ಹುಲಿ ಓಡಾಡುತ್ತಿದ್ದು, ಜನರು ಭೀತಿಯಲ್ಲಿದ್ದಾರೆ. ಗುರುವಾರ ಸಂಜೆ ದೇಶಿಪುರ ಕಾಲೋನಿಯಲ್ಲಿ ಹುಲಿ ಮಹಿಳೆಯನ್ನು ಕೊಂದು ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.

ಅರಣ್ಯ ಇಲಾಖೆ ಕೂಡಲೆ ಬೋನು ಇರಿಸಿ ಹುಲಿ ಸೆರೆ ಹಿಡಿಯಬೇಕು. ನಮ್ಮ ಜಮೀನಿನಲ್ಲಿಯೇ ಹುಲಿ ಒಡಾಡುತ್ತಿದೆ, ಮನುಷ್ಯನ ಮೇಲೆ ಹುಲಿ ದಾಳಿ ನಡೆಸಿ ಮನುಷ್ಯನ ಪ್ರಾಣ ಹೋದ ಮೇಲೆ ಜಾಗೃತರಾಗುವ ಮೊದಲೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಬೋನು ಇರಿಸಬೇಕು ಎಂದು ವಕೀಲ ಸುರೇಶ್ ಮೌರಿ ಒತ್ತಾಯಿಸಿದ್ದಾರೆ.

Tags:
error: Content is protected !!