ಗುಂಡ್ಲುಪೇಟೆ : ಹುಲಿಗಳ ನೆಚ್ಚಿನ ತಾಣವಾದ ಬಂಡೀಪುರದಲ್ಲಿ ಸಫಾರಿಗೆ ತೆರಳುವವರಿಗೆ ಹುಲಿ ಕಾಣಿಸಿಕೊಂಡರೆ ಹೆಚ್ಚು ಸಂತೋಷವೇ ಆಗುವುದು. ಅದರಲ್ಲೂ ಒಂದೇ ಸ್ಥಳದಲ್ಲಿ ಮೂರುಕ್ಕೂ ಹೆಚ್ಚು ಹುಲಿ ಕಾಣಿಸಿಕೊಂಡರೇ ಪ್ರವಾಸಿಗರ ಸಂತೋಷ ಹೇಳತೀರದು. ಈ ರೀತಿಯ ಒಂದು ಖುಷಿ ಬಂಡೀಪುರಕ್ಕೆ ಪ್ರವಾಸಕ್ಕೆ ತೆರಳಿದವರಿಗೆ ಸಿಕ್ಕಿದೆ.
ಬಂಡೀಪುರ ಸಫಾರಿ ವಲಯದಲ್ಲಿ ಎರಡು ಮರಿಗಳ ಜೊತೆ ಹುಲಿ ಸಾಗುತ್ತಾ, ನೀರಿನಲ್ಲಿ ಆಟವಾಡುತ್ತಿರುವ ದೃಶ್ಯವನ್ನು ಪ್ರವಾಸಿಗರ ಕ್ಯಾಮಾರೆದಲ್ಲಿ ಸೆರೆಯಾಗಿದೆ. ಅನೇಕ ಬಾರಿ ಹುಲಿಯ ದರ್ಶನವಾಗುವುದಿಲ್ಲ. ಆದರೆ, ಹುಲಿಯು ತನ್ನ ಪುಟ್ಟ ಮರಿಗಳ ಜೊತೆ ಕಾಣಿಸಿಕೊಂಡಿರುವುದು ಪ್ರವಾಸಿರನ್ನು ಮುದಗೊಳಿಸಿದೆ. ಪ್ರವಾಸಿಗರಿಗೂ ಹೆದರದೇ ಹುಲಿ ತನ್ನ ಮಕ್ಕಳೊಂದಿಗೆ ಕಾಲ ಕಳೆದಿದ್ದು ವಿಶೇಷವಾಗಿತ್ತು.





