Mysore
25
overcast clouds

Social Media

ಶನಿವಾರ, 28 ಮಾರ್ಚ್ 2026
Light
Dark

ಹುಲಿ ದಾಳಿ; ಹಸು ಸಾವು

ಗುಂಡ್ಲುಪೇಟೆ : ತಾಲ್ಲೂಕಿನಲ್ಲಿ ಹುಲಿ ದಾಳಿ ಪ್ರಕರಣಗಳು ಮುಂದುವರಿದಿದ್ದು ಹಸುವಿನ ಮೇಲೆ ದಾಳಿ ಮಾಡಿದ ವ್ಯಾಘ್ರ ರಕ್ತ ಹೀರಿ ಕೊಂದಿರುವ ಘಟನೆ ತಾಲ್ಲೂಕಿನ ದೇಪಾಪುರದಲ್ಲಿ ನಡೆದಿದೆ.

ತಾಲ್ಲೂಕಿನ ದೇಪಾಪುರ ಗ್ರಾಮದ ಗುರುಮಲ್ಲಪ್ಪ ಹಸು ಕಳೆದುಕೊಂಡಿರುವ ರೈತ. ವೀರಭದ್ರಪ್ಪ ಎಂಬವರ ಜಮೀನಿನಲ್ಲಿ ಹಸು ಮೇಯಿಸುವಾಗ ಹುಲಿ ದಾಳಿ ನಡೆಸಿದ್ದು, ಕುತ್ತಿಗೆಗೆ ಬಾಯಿ ಹಾಕಿ ರಕ್ತ ಹೀರಿ ಕೊಂದಿದೆ.
ಕೂಡಲೇ ಹುಲಿಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ:-ಮೈಸೂರು | ಜಿಲ್ಲೆಯಲ್ಲಿ ಅಪೌಷ್ಠಿಕ‌ ಮಕ್ಕಳ ಸಂಖ್ಯೆ ಗಣನೀಯ ಇಳಿಕೆ

ಪರಿಹಾರ ಬೇಡ ಹಸು ತೆಗೆದುಕೊಡಿ:
ಹುಲಿ ದಾಳಿ ವಿಚಾರ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ ವೇಳೆ ರೈತರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಹುಲಿ ದಾಳಿಗೆ ಮೃತಪಟ್ಟ ಹಸು ನಿತ್ಯ ೧೦ ಲೀ. ಹಾಲು ಕೊಡುತ್ತಿತ್ತು. ಹೈನುಗಾರಿಕೆಯಿಂದ ಜೀವನ ಸಾಗಿಸುತ್ತಿದ್ದೆವು. ಈಗ, ಹಸು ಕಳೆದುಕೊಂಡು ನಷ್ಟ ಉಂಟಾಗಿದ್ದು ತಮಗೆ ಪರಿಹಾರ ಬೇಡ, ಹಸುವನ್ನು ಖರೀದಿಸಿ ಕೊಡಿ. ನೀವು ಪ್ರಾಣಿಗಳನ್ನು ರಕ್ಷಣೆ ಮಾಡಿದಂತೆ ರೈತರನ್ನೂ ರಕ್ಷಿಸಿ ಎಂದು ರೈತರು ಆಗ್ರಹಿಸಿದ್ದಾರೆ.

Tags:
error: Content is protected !!