ಹನೂರು : ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ತಡೆಗಟ್ಟುವ ನಿಟ್ಟಿನಲ್ಲಿ ತಪಾಸಣೆಗೆ ತೆರಳುತ್ತಿದ್ದ ಅಬಕಾರಿ ನಿರೀಕ್ಷಕ ದಯಾನಂದರವರಿಗೆ ಮಲೆ ಮಹದೇಶ್ವರ ಬೆಟ್ಟ – ಪಾಲಾರ್ ರಸ್ತೆ ಮಧ್ಯದಲ್ಲಿ ಮುಳ್ಳು ಹಂದಿ ಹಾಗೂ ಕಾಡಾನೆಗಳ ಹಿಂಡು ದರ್ಶನವಾಗಿದೆ.
ಕೊಳ್ಳೇಗಾಲ ಅಬಕಾರಿ ನಿರೀಕ್ಷಕ ದಯಾನಂದ ಹಾಗೂ ಸಿಬ್ಬಂದಿ ಮ.ಬೆಟ್ಟದಿಂದ ಗೋಪಿನಾಥಂ ಗ್ರಾಮಕ್ಕೆ ರಾತ್ರಿ ಪಾಳಿಯ ಗಸ್ತು ಮಾಡಲು ಶನಿವಾರ ರಾತ್ರಿ 10 ಗಂಟೆಯ ವೇಳೆ ತೆರಳುತ್ತಿದ್ದಾಗ ರಸ್ತೆಯಲ್ಲಿ ಮುಳ್ಳು ಹಂದಿಗಳು ಕಾಣಿಸಿಕೊಂಡಿವೆ.
ಮುಳ್ಳು ಹಂದಿಗಳು ಮುಂದೆ ಹೋದ ನಂತರ ಪಾಲಾರ್ ಗ್ರಾಮಕ್ಕೆ ತೆರಳುತ್ತಿದ್ದರು. ಇದೇ ವೇಳೆ ಮ.ಬೆಟ್ಟಕ್ಕೆ ಸರಬರಾಜು ಮಾಡುವ ಕಾವೇರಿ ನೀರಿನ ಪಂಪ್‌ಹೌಸ್ ಸಮೀಪ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದೆ. ತಕ್ಷಣ ಅಬಕಾರಿ ನಿರೀಕ್ಷಕ ದಯಾನಂದ್ ಹಾಗೂ ಸಿಬ್ಬಂದಿ ವಾಪಸ್ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದಾರೆ.





