Mysore
24
mist

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಚಾ.ನಗರ ಜಿಲ್ಲೆಯ ವಿವಿಧೆಡೆ ಕಳವು ; 14 ಮಂದಿ ಬಂಧನ

ಚಾಮರಾಜನಗರ : ಜಿಲ್ಲೆಯ ವಿವಿಧೆಡೆ ಮನೆಗಳ್ಳತನ, ಬೈಕ್ ಗಳ ಕಳವು ಮಾಡಿರುವುದಕ್ಕೆ ಸಂಬಂಧಿಸಿದಂತೆ ಒಂದು ತಿಂಗಳ ಅವಧಿಯಲ್ಲಿ ೧೪ ಆರೋಪಿಗಳನ್ನು ಬಂಧಿಸಿ ಅವರಿಂದ ಸುಮಾರು ೨೮೫ ಗ್ರಾಂ ಚಿನ್ನಾಭರಣ, ೪೫ ಗ್ರಾಂ ಬೆಳ್ಳಿ, ೨ ಓಮ್ನಿ ವಾಹನ , ೧೦ ಬೈಕ್‌ಗಳು ಹಾಗೂ ೫೫ ಸಾವಿರ ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಚಾಮರಾಜನಗರ ತಾಲ್ಲೂಕಿನ ಹೊಂಗನೂರು ಗ್ರಾಮದ ಬಂಗಾರ ಸ್ವಾಮಿ, ವಿವೇಕ್, ಅಭಿ, ಕಾಗಲವಾಡಿ ಮುಬಾರಕ್, ಕೆಂಗಾಕಿ ಬಸವರಾಜು, ಅಮಚವಾಡಿ ಸಿದ್ದರಾಜು, ಯಳಂದೂರು ತಾಲ್ಲೂಕಿನ ಬೀಚಹಳ್ಳಿ ಪ್ರವೀಣ್ ಕುಮಾರ್, ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲದ ನಟೇಶ್, ಬೆಂಗಳೂರಿನ ಚಂದ್ರಪ್ಪ, ಸಂತೋಷ್ , ಮುಬಾರಕ್ ಹಾಗೂ ಇಬ್ಬರು ಬಾಲ ಆರೋಪಿಗಳು ಒಳಗೊಂಡಂತೆ ೧೪ ಮಂದಿಯನ್ನು ದಸ್ತಗಿರಿ ಮಾಡಲಾಗಿದೆ.

ಇದನ್ನೂ ಓದಿ:-ಸಿಎಂ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟದ್ದು : ಸಚಿವ ಚಲುವರಾಯಸ್ವಾಮಿ

ವಶಪಡಿಸಿಕೊಂಡಿರುವ ಈ ಎಲ್ಲದರ ಒಟ್ಟು ಮೌಲ್ಯ ೨೨,೨೩,೩೦೦ ರೂ. ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಅವರು ತಮ್ಮ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಆರೋಪಿಗಳ ಪೈಕಿ ಜಿಲ್ಲೆಯವರೇ ಹೆಚ್ಚು ಇದ್ದಾರೆ. ಅದರಲ್ಲೂ ೧೯, ೨೦, ೨೨ರ ವಯೋಮಾನದವರೂ ಇದ್ದಾರೆ. ಬಂಽತರಲ್ಲಿ ಹಳೆಯ ಪ್ರಕರಣದಲ್ಲಿ ಭಾಗಿಯಾದವರು, ಇದೇ ಮೊದಲ ಬಾರಿಗೆ ಕಳ್ಳತನ ಮಾಡಿದವರೂ ಇದ್ದಾರೆ. ಬಾಲ ಆರೋಪಿಗಳನ್ನು ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸಲಾಗಿದೆ ಎಂದರು.

ಕೊಳ್ಳೇಗಾಲ ಗ್ರಾಮಾಂತರ ಠಾಣೆ, ಯಳಂದೂರು ಠಾಣೆಯಲ್ಲಿ ತಲಾ ೨, ರಾಮಾಪುರ, ಕುದೇರು, ಚಾಮರಾಜನಗರ ಪೂರ್ವ ಠಾಣೆಯಲ್ಲಿ ತಲಾ ೧, ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ೨, ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ೩ ಸೇರಿದಂತೆ ಒಟ್ಟು ೧೨ ಕಳವು ಪ್ರಕರಣಗಳಿಗೆ ಸಂಬಂಽಸಿದಂತೆ ಆರೋಪಿಗಳನ್ನು, ಕಳವು ಮಾಲನ್ನು ಜಿಲ್ಲಾ ಅಪರಾಧ ವಿಶೇಷ ದಳದವರು ಪತ್ತೆ ಹಚ್ಚಿದ್ದಾರೆ. ಕಾನೂನು ರೀತ್ಯಾ ಮುಂದಿನ ಕ್ರಮ ವಹಿಲಾಗಿದೆ ಎಂದು ಎಸ್ಪಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಡಿವೈಎಸ್ಪಿಗಳಾದ ಚಾಮರಾಜನಗರದ ಸ್ನೇಹರಾಜ್, ಕೊಳ್ಳೇಗಾಲದ ಧರ್ಮೇಂದ್ರ ಹಾಜರಿದ್ದರು.

Tags:
error: Content is protected !!