Mysore
22
mist

Social Media

ಭಾನುವಾರ, 07 ಡಿಸೆಂಬರ್ 2025
Light
Dark

ತಗ್ಗಲೂರು | ಬೋನಿಗೆ ಬಿದ್ದ ಚಿರತೆ ; ಗ್ರಾಮಸ್ಥರು ನಿರಾಳ

ಗುಂಡ್ಲುಪೇಟೆ : ತಾಲ್ಲೂಕಿನ ತಗ್ಗಲೂರು ಗ್ರಾಮದ ತಮ್ಮಯಪ್ಪ ಎಂಬವರ ಜಮೀನಿನಲ್ಲಿ ಇರಿಸಲಾಗಿದ್ದ ಬೋನಿನಲ್ಲಿ 5 ವರ್ಷದ ಹೆಣ್ಣು ಚಿರತೆ ಸೆರೆಯಾಗಿದೆ.

ತಗ್ಗಲೂರು ಸುತ್ತಮುತ್ತ ಚಿರತೆ ಹಾವಳಿ ಇದ್ದ ಕಾರಣ ಬಫರ್ ವಲಯದ ಅರಣ್ಯಾಧಿಕಾರಿಗಳು ಬೋನು ಇರಿಸಿದ್ದರು. ಕೊನೆಗೂ ಭಾನುವಾರ ಬೆಳಿಗ್ಗೆ ಚಿರತೆ ಬೋನಿನಲ್ಲಿ ಬಂದಿಯಾಗಿದೆ. ಈ ಮೂಲಕ ಗ್ರಾಮಸ್ಥರು ನಿರಾಳರಾಗಿದ್ದಾರೆ.

ಚಿರತೆಯನ್ನು ತಮಿಳುನಾಡು ಗಡಿಭಾಗದ ಬಂಡೀಪುರ ವಲಯದ ಅರಣ್ಯದೊಳಗೆ ಬಿಡಲಾಗಿದೆ ಎಂದು ಬಫರ್ ವಲಯಾಧಿಕಾರಿ ಶಿವಕುಮಾರ್ ತಿಳಿಸಿದರು.

Tags:
error: Content is protected !!