ಕೊಳ್ಳೇಗಾಲ : ಕುಂತೂರು ಗ್ರಾಮದ ಜಮೀನಿನಲ್ಲಿ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ ಕವಿತಾ ತಮ್ಮ ಇಬ್ಬರು ಮಕ್ಕಳೊಂದಿಗೆ ಭತ್ತದ ಸಸಿ ನಾಟಿ ಮಾಡಿದರು.
ಗ್ರಾಮದ ಚಂದ್ರುರವರ ಜಮೀನಿಗೆ ಕುಟುಂಬ ಸಮೇತ ಆಗಮಿಸಿ ಭತ್ತ ನಾಟಿ ಮಾಡಿ ಗಮನ ಸೆಳೆದಿದ್ದಾರೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಹಿಳೆರೊಟ್ಟಿಗೆ ಸೇರಿ ನಾಟಿ ಮಾಡಿದರು. ಈ ವೇಳೆ ಮಕ್ಕಳು ಕೆಸರುಗದ್ದೆಯಲ್ಲಿ ಆಟವಾಡುವ ಮೂಲಕ ಸಂಭ್ರಮಿಸಿದರು.
ಮಹಿಳಾ ಪೊಲೀಸ್ ಅಧಿಕಾರಿಯಾಗಿದ್ದರೂ ಸಾಮಾನ್ಯ ಮಹಿಳೆಯರಂತೆ ಜಮೀನಿಗೆ ತೆರಳಿ ಕೂಲಿ ಕಾರ್ಮಿಕರ ಜತೆ ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದನ್ನು ನೋಡಿದ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.





