ಚಾಮರಾಜನಗರ: ಡಿಸಿಎಂ ಡಿ.ಕೆ.ಶಿವಕುಮಾರ್ ಸಿಎಂ ಆಗಬಾರದು ಎಂಬುದೇ ಸಿಎಂ ಸಿದ್ದರಾಮಯ್ಯರ ಮುಖ್ಯ ಉದ್ದೇಶ ಎಂದು ಸಂಸದ ಜಗದೀಶ್ ಶೆಟ್ಟರ್ ಲೇವಡಿ ಮಾಡಿದ್ದಾರೆ.
ಈ ಕುರಿತು ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡುವ ವ್ಯಕ್ತಿ ಅಲ್ಲ. ಅವರೇ ಸಿಎಂ ಆಗಿರುತ್ತಾರೆ. ಎಲ್ಲರೂ ಬಂಡಾಯ ಎದ್ದ ಬಳಿಕ ಸತೀಶ್ ಜಾರಕಿಹೊಳಿ ಅವರನ್ನು ಮುನ್ನೆಲೆಗೆ ತರುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ:-ಕೆ.ಆರ್.ಪೇಟೆ| ಒಂದೇ ದಿನ ಗಂಡ ಹೆಂಡತಿ ಇಬ್ಬರೂ ಸಾವು
ಇನ್ನು ಮುಂದುವರಿದು ಮಾತನಾಡಿದ ಅವರು, ದಲಿತ ಸಮುದಾಯಕ್ಕೆ ಸಿಎಂ ಸ್ಥಾನ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಮುಖ್ಯ ಉದ್ದೇಶವೆಂದರೆ ಡಿಕೆಶಿ ಸಿಎಂ ಆಗಬಾರದು ಎಂದು ಲೇವಡಿ ಮಾಡಿದರು.





