ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲೂಕಿನ ವಸತಿ ಪ್ರೌಢಾಶಾಲೆಯಲ್ಲಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಶಿಕ್ಷಕರೊಬ್ಬರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
17 ವರ್ಷದ ಬಾಲಕ ಬುಡಕಟ್ಟು ಸಮುದಾಯದವನಾಗಿದ್ದು, ಈ ಬಾರಿಯ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಬರೆದಿದ್ದ. ಬಾಲಕನ ಕೊನೆಯ ಪರೀಕ್ಷೆ ದಿನ ಸಲಿಂಗಕಾಮಿಯಾಗಿರುವ ಶಿಕ್ಷಕ, ಪರೀಕ್ಷೆಗೆ ಓದಿಕೊಳ್ಳುತ್ತಿದ್ದ ವಿದ್ಯಾರ್ಥಿಯನ್ನು ತನ್ನ ಕೊಠಡಿಗೆ ಕರೆಯಿಸಿ, ಬಾಲಕನಿಗೆ ಮದ್ಯಪಾನ, ದೂಮಪಾನ ಮಾಡಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಬಾಲಕನು ಮೈಸೂರಿನ ಒಡನಾಡಿ ಸಂಸ್ಥೆಯ ನಿರ್ದೇಶಕರಿಗೆ ಏಪ್ರಿಲ್ 12 ರಂದು ದೂರು ನೀಡಿದ್ದಾನೆ. ಒಡನಾಡಿ ನಿರ್ದೇಶಕ ಪರಸುರಾಮ್ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪನಾಗ್ ಅವರಿಗೆ ದೂರು ನೀಡಿದ ಬಳಿಕ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿ ಶಿಕ್ಷಕ ಹಿಂದಿನಿಂದಲೂ ಇಂತಹ ಕೃತ್ಯ ಮಾಡಿಕೊಂಡು ಬಂದಿದ್ದಾನೆ ಎನ್ನಲಾಗಿದೆ. ಹಲವು ವರ್ಷಗಳಿಂದ ಮಕ್ಕಳ ಮೇಲೆ ದೌರ್ಜನ್ಯ ಎಸಗುತ್ತಾ ಬಂದಿದ್ದಾನೆ ಎಂದು ದೂರಲಾಗಿದೆ.