Mysore
26
haze

Social Media

ಶನಿವಾರ, 20 ಡಿಸೆಂಬರ್ 2025
Light
Dark

ತುಕ್ಕುಹಿಡಿದ ಬೋರ್‌ವೆಲ್‌ ಪೈಪ್‌ : ಕ್ರಿಮಿಕೀಟದ ಅಪಾಯ

Rusty borewell pipe poses risk of bacterial infestation.

ಮೂಗೂರು : ಗ್ರಾಮದ ಅಂಬೇಡ್ಕರ್ ಬಡಾವಣೆಯಲ್ಲಿನ ಅಂಗನವಾಡಿ ಕೇಂದ್ರದ ಬಳಿ ಇರುವ ಬೋರ್‌ವೆಲ್‌ನ ಕಬ್ಬಿಣದ ಪೈಪ್ ತುಕ್ಕು ಹಿಡಿದು ಪೈಪ್ ಇರುವ ಜಾಗ ಬಾಯ್ತೆರೆದಿದ್ದು ಕ್ರಿಮಿಕೀಟಗಳು ಒಳಗೆ ಪ್ರವೇಶಿಸುವ ಅಪಾಯ ಎದುರಾಗಿದೆ.

ಬಡಾವಣೆಯ ಮುಖ್ಯ ರಸ್ತೆಯ ಬದಿಯಲ್ಲಿರುವ ಈ ಬೋರ್‌ವೆಲ್‌ನ ನೀರನ್ನು ಸಾಕಷ್ಟು ಕುಟುಂಬಗಳು ಕುಡಿಯಲು ಬಳಕೆ ಮಾಡುತ್ತಿದ್ದು, ಪೈಪ್‌ನ ಬಳಿ ಇರುವ ರಂದ್ರದ ಮೂಲಕ ಸಣ್ಣ ಪುಟ್ಟ ಕ್ರಿಮಿಕೀಟಗಳು ಒಳ ಪ್ರವೇಶಿಸಿದರೆ, ಆ ನೀರನ್ನು ಸೇವಿಸುವ ಜನರಿಗೆ ಅನಾರೋಗ್ಯ ಕಾಡುವ ಅಪಾಯವಿದೆ. ಆದ್ದರಿಂದ ಸಂಬಂಧಪಟ್ಟವರು ಈ ಕುರಿತು ಕ್ರಮ ಕೈಗೊಳ್ಳಬೇಕಿದೆ.

ತುಕ್ಕು ಹಿಡಿದ ಕಬ್ಬಿಣದ ಪೈಪ್ ಯಾರ ಕಣ್ಣಿಗೂ ಬೀಳಬಾರದು ಎಂದು ಗ್ರಾಪಂ ಸಿಬ್ಬಂದಿಯೊಬ್ಬರು ಯಾರೊಬ್ಬರ ಗೋಣಿಚೀಲವನ್ನು ಪೈಪ್‌ಗೆ ಸುತ್ತಿ ಮರೆಮಾಚಿದ್ದಾರೆ.

Tags:
error: Content is protected !!