ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ ಎಂಬವರು ಬೆಂಗಳೂರಿನ ಕಮಲೇಶ್ ಹಾಗೂ ಸರೋಜಮ್ಮ ಎಂಬವರ ವಿರುದ್ಧ ದೂರು ದಾಖಲಿಸಿದ್ದಾರೆ.
ಮಧುವನಹಳ್ಳಿ ಉಪ್ಪಾರ ಬೀದಿ ಮಮತಾ ಎಂಬವರು ನೀಡಿರುವ ದೂರಿನಲ್ಲಿ, ನಾನೂ ಸೇರಿದಂತೆ ಒಟ್ಟು ೨೪ ಮಂದಿ ಹಾರ್ಟ್ ಅಕಾಡೆಮಿ ಎಂಬ ಸಂಸ್ಥೆಯಲ್ಲಿ ಠೇವಣಿ ಇಟ್ಟಿದ್ದೆವು.
ಕಳೆದ ವರ್ಷ ಡಿಸೆಂಬರ್ ನಲ್ಲಿ ಪರಮಹಂಸ ರಸ್ತೆುಂಲ್ಲಿ ಕಚೇರಿಯನ್ನು ತೆರೆುಂಲಾಗಿತ್ತು. ಕಮಲೇಶ್ ಹಾಗೂ ಸರೋಜಮ್ಮ ಅವರು, ನೀವು ಇದೇ ರೀತಿ ಹಣ ಸಂಗ್ರಹಿಸಿ ನೀಡಿದರೆ ತಿಂಗಳಿಗೆ ೨೫ ಸಾವಿರ ರೂ. ಮತ್ತು ನಿಮ್ಮ ಕುಟುಂಬದ ಎಲ್ಲರನ್ನು ವಿಮೆುಂಲ್ಲಿ ಸೇರಿಸಿ ಆಸ್ಪತ್ರೆಯ ಬಿಲ್ ನ್ನು ಉಚಿತವಾಗಿ ಭರಿಸುತ್ತೇವೆ ಎಂದು ನಂಬಿಸಿದ್ದರು. ಅವರ ವಾತನ್ನು ನಂಬಿ ನಾವು ೨೪ ಮಂದಿ ಹಣ ಸಂಗ್ರಹಿಸಿ ಠೇವಣಿ ಇಟ್ಟಿದ್ದೆವು. ಆದರೆ ಕಮಲೇಶ್ ಹಾಗೂ ಸರೋಜಮ್ಮ ಕಚೇರಿಯಲ್ಲಿ ಕಾಣಿಸಿಕೊಳ್ಳದಿದ್ದಾಗ ದೂರವಾಣಿ ಮೂಲಕ ಸಂಪರ್ಕಿಸಿ ವಿಚಾರಿಸಿದೆವು. ಆಗ ನೀವು ಗಾಬರಿ ಪಡುವ ಅಗತ್ಯವಿಲ್ಲ. ನಾವು ಇಷ್ಟರಲ್ಲೇ ಬರುತ್ತೇವೆ ಎಂದರು.
ಆದರೆ ಈಗ ಡಿಸೆಂಬರ್ ೪ ರಂದು ಪರಮಹಂಸ ರಸ್ತೆಲ್ಲಿ ತೆರೆಯಲಾಗಿದ್ದ ಕಚೇರಿಯನ್ನು ಖಾಲಿಮಾಡಿ ಪೀಠೋಪಕರಣಗಳನ್ನು ಕೊಂಡೊಯ್ದಿದ್ದಾರೆ. ಹೀಗಾಗಿ ನಾವು ಮೋಸ ಹೋಗಿರುವುದು ಗೊತ್ತಾಗಿದೆ. ನಮ್ಮ ಹಣವನ್ನು ಕೊಡಿಸಬೇಕು ಎಂದು ಮನವಿ ವಾಡಿದ್ದಾರೆ.
ದೂರು ದಾಖಲಿಸಿಕೊಂಡಿರುವ ಪಟ್ಟಣ ಪೊಲೀಸರು ಆರೋಪಿಗಳಾದ ಕಮಲೇಶ್ ಹಾಗೂ ಸರೋಜಮ್ಮ ಅವರ ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ.




