ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಇಂದು ನಟ ರಾಘವೇಂದ್ರ ರಾಜ್ಕುಮಾರ್ ಕುಟುಂಬ ಸಮೇತ ಭೇಟಿ ನೀಡಿದ್ದಾರೆ. ಪತ್ನಿ ಮಂಗಳಾ, ಕಿರಿಯ ಪುತ್ರ ಯುವ ರಾಜ್ಕುಮಾರ್ ರಾಘವೇಂದ್ರ ರಾಜ್ಕುಮಾರ್ ಸಾಥ್ ನೀಡಿದ್ದಾರೆ. ದಾಸೋಹ ಭವನದಲ್ಲಿ ಅವರು ಪ್ರಸಾದ ಸೇವಿಸಿದ್ದಾರೆ. ಮಲೆ ಮಹದೇಶ್ವರನ ತಾಣ ನಮಗೆ ಸ್ವರ್ಗದಂತೆ ಭಾಸವಾಗುತ್ತಿದೆ. ವರ್ಷಕ್ಕೆ ಒಮ್ಮೆಯಾದರೂ ಬರಬೇಕು ಅನಿಸುತ್ತದೆ. ನಮ್ಮ ತಂದೆ ರಾಜಕುಮಾರ್ ಅವರು ಒಂದು ಸಲ ಇಲ್ಲಿಗೆ ಕರೆದುಕೊಂಡು ಬಂದಿದ್ದರು. ಆ ಮೇಲೆ ಇಲ್ಲಿಗೆ ನಾನು ಬಂದಿರಲಿಲ್ಲ ಎಂದು ರಾಘವೇಂದ್ರ ರಾಜ್ಕುಮಾರ್ ಹೇಳಿದ್ದಾರೆ.