ಹನೂರು : ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿ ವಿಲೇಜ್ ನ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿ ವಿಲೇಜ್ ನ ಗ್ರಾಮಸ್ಥರು ಮಾತನಾಡಿ ನಮ್ಮ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಸಮರ್ಪಕ ಕುಡಿಯುವ ನೀರು ಇಲ್ಲದೇ ಇರುವುದರಿಂದ ಶೌಚಾಲಯಕ್ಕೆ ಹೋಗಲು ತೊಂದರೆಯಾಗುತ್ತಿದೆ. ಮೂರು ನಾಲ್ಕು ದಿನಗಳಿಗೊಮ್ಮ ಸ್ನಾನ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಮರ್ಪಕ ಮಳೆ ಇಲ್ಲದೆ ಕೂಲಿಯೂ ಸಹ ಇಲ್ಲ ಇರುವಂತಹ ಕೂಲಿ ಕೆಲಸವನ್ನು ಬಿಟ್ಟು ಕುಡಿಯವ ನೀರು ಹಿಡಿಯಲು ಕಷ್ಟ ಪಡುತ್ತಿದ್ದೇವೆ. ಕುಡಿಯುವ ನೀರು ಪೂರೈಕೆ ಮಾಡುವಂತೆ ಪಿಡಿಒ ರಂಗರಾಜುರವರಿಗೆ ಹಲವಾರು ಬಾರಿ ಮನವಿ ನೀಡಿದ್ದರು, ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಅವರು ಪಂಚಾಯಿತಿಗೆ ಸರಿಯಾಗಿ ಬರುತ್ತಿಲ್ಲ ಇವರನ್ನು ಮೊದಲು ಬೇರೆ ಕಡೆಗೆ ವರ್ಗಾವಣೆ ಮಾಡಿ ನಮ್ಮ ಗ್ರಾಮಕ್ಕೆ ಒಳ್ಳೆಯ ಅಧಿಕಾರಿಗಳನ್ನು ನೇಮಕ ಮಾಡುವಂತೆ ಒತ್ತಾಯಿಸಿದರು.
ಇನ್ನು ಒಂದು ದಿನ ಒಳಗೆ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡದಿದ್ದರೆ ಚಾಮರಾಜನಗರ ಜಿಲ್ಲಾ ಆಡಳಿತದ ಕಚೇರಿ ಮುಂಭಾಗ ಪ್ರತಿಭಟನೆ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಗ್ರಾಮದ ನಿವಾಸಿ ಸೆಲ್ವಿ ಮಾತನಾಡಿ ನಮ್ಮ ಶ್ರೀ ವಿಲೇಜ್ ನಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳಿದ್ದು ಕಳೆದ ಎರಡು ತಿಂಗಳಿನಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡದೆ ಇರುವುದರಿಂದ ತೊಂದರೆಯಾಗುತ್ತಿದೆ. ಮಳೆ ಇಲ್ಲದೆ ಇರುವುದರಿಂದ ಜಮೀನುಗಳಲ್ಲಿಯೂ ಸಹ ನೀರು ಕೊಡುತ್ತಿಲ್ಲ ಪ್ರತಿದಿನ ಒಬ್ಬರಿಗೆ ಮೂರು ಬಿಂದಿಗೆ ನೀರು ಕೊಡುತ್ತಾರೆ, ಗ್ರಾಮದವರು ಎಲ್ಲರೂ ಒಂದೇ ತೋಟಕ್ಕೆ ನೀರಿಗಾಗಿ ಹೋದರೆ ಅವರು ತಾನೇ ಏನು ಮಾಡಲು ಸಾಧ್ಯ, ಕೆಲವು ದಿನಗಳ ಕಾಲ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದರು. ಇದೀಗ ಟ್ಯಾಂಕರ್ ನಲ್ಲಿಯೂ ನೀರು ಕೊಡುತ್ತಿಲ್ಲ,ಹ್ಯಾಂಡ್ ಪಂಪ್ ನಲ್ಲಿ ನೀರು ಬರುತ್ತಿದ್ದರು ನೀರಿನಲ್ಲಿ ಮಣ್ಣಿನ ಅಂಶ ಹೆಚ್ಚಾಗಿರುವುದರಿಂದ ಇದನ್ನು ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ಸಂಬಂಧಪಟ್ಟ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು ಇಲ್ಲದಿದ್ದರೆ ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ಆಕ್ರೋಶ ಹೂರಹಾಕಿದರು.





