Mysore
17
overcast clouds

Social Media

ಭಾನುವಾರ, 21 ಡಿಸೆಂಬರ್ 2025
Light
Dark

25ರಂದು ಪತ್ರಿಕಾ ದಿನಾಚರಣೆ : ನಾಗಲಕ್ಷ್ಮಿ ಚೌಧರಿ ಭಾಗಿ

Press Day celebration on the 25th Nagalakshmi Chaudhary participates

ಹನೂರು: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜುಲೈ 25ರಂದು ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿ ಚೌಧರಿ ರವರು ಆಗಮಿಸುತ್ತಿದ್ದು ಕ್ಷೇತ್ರದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ತಾಲೂಕು ಅಧ್ಯಕ್ಷ ಮಹಾದೇಶ್ ಮನವಿ ಮಾಡಿದರು.

ಹನೂರು ಪಟ್ಟಣದ ಲೋಕೋಪಯೋಗಿ ವಸತಿಗೃಹದಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಸಂಬಂಧ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಪ್ರತಿ ವರ್ಷವೂ ತಾಲೂಕು ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತಿದೆ. ಆದರೆ ಈ ಬಾರಿ ವಿಶೇಷವಾಗಿ ಮಹಿಳೆಯರ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಮಹಿಳಾ ಆಯೋಗದ ಅಧ್ಯಕ್ಷರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಅವರು ಸಹ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎರಡು ದಿನ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದು ಜುಲೈ 25ರ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಈ ನಿಟ್ಟಿನಲ್ಲಿ ಮಹಿಳಾ ಸಂಘ ಸಂಸ್ಥೆಗಳ ಮುಖ್ಯಸ್ಥರು, ನೊಂದ ಮಹಿಳೆಯರು ತಮ್ಮ ಗ್ರಾಮಗಳಲ್ಲಿರುವ ಹಾಗೂ ವೈಯಕ್ತಿಕ ಸಮಸ್ಯೆಗಳಿದ್ದರೆ ಮುಖಾಮುಖಿ ಚರ್ಚೆ ನಡೆಸಿ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮಕ್ಕೆ ಸಂಸದ ಸುನೀಲ್ ಬೋಸ್, ಸ್ಥಳೀಯ ಶಾಸಕರಾದ ಎಂ.ಆರ್ ಮಂಜುನಾಥ್, ಮಾಜಿ ಶಾಸಕರಾದ ಆರ್ ನರೇಂದ್ರ,ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷ ದೇವರಾಜ ಕಪ್ಪಸೋಗೆ ,ಪ್ರಧಾನ ಕಾರ್ಯದರ್ಶಿ ಪ್ರಸಾದ್ ಲಕ್ಕೂರು, ರಾಜ್ಯ ಸಮಿತಿ ಸದಸ್ಯ ಗೂಳಿಪುರ ನಂದೀಶ್ , ತಹಸಿಲ್ದಾರ್ ವೈ ಕೆ ಗುರುಪ್ರಸಾದ್ ಸೇರಿದಂತೆ ಇನ್ನಿತರ ಮುಖ್ಯ ಅತಿಥಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ತೀರ್ಮಾನಿಸಲಾಯಿತು.

ಇಬ್ಬರು ಪತ್ರಕರ್ತರಿಗೆ ದತ್ತಿ ಪ್ರಶಸ್ತಿ:
ಪಟ್ಟಣದ ಕನ್ನಡಪ್ರಭ ವರದಿಗಾರರಾದ ದೇವರಾಜು ನಾಯ್ಡು ರವರು ತಮ್ಮ ತಂದೆ ತಾಯಿ, ಶ್ರೀ ಗೋವಿಂದ ನಾಯ್ಡು, ಶ್ರೀ ಸಾವಿತ್ರಮ್ಮ ಜ್ಞಾಪಕರ್ತವಾಗಿ ನೀಡುವ ಪ್ರಶಸ್ತಿಗೆ ಪ್ರಭುಸ್ವಾಮಿ ರವರನ್ನು, ವಿಜಯ ಕರ್ನಾಟಕ ವರದಿಗಾರರಾದ ಅಭಿಲಾಶ್ ರವರು ತಮ್ಮ ಅಜ್ಜಿ ತಾತ ಚಂದ್ರಮ್ಮ ಮತ್ತು ಬೋಳೇಗೌಡ ರವರ ಜ್ಞಾಪಕರ್ತವಾಗಿ ನೀಡುವ ಪ್ರಶಸ್ತಿಗೆ ಯುವ ಸಾಹಿತಿ ಹಾಗೂ ಪತ್ರಕರ್ತ ರಮೇಶ್ ರವರನ್ನು ಆಯ್ಕೆ ಮಾಡಲಾಗಿದೆ.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ತಾಲೂಕು ಪತ್ರಕರ್ತರಿಗೆ ನೀಡುವ ಪ್ರಶಸ್ತಿಗೆ ಸುರೇಶ್ ಅಜ್ಜೀಪುರ ರವರನ್ನು ಆಯ್ಕೆ ಮಾಡಲಾಯಿತು. ಉಳಿದಂತೆ ಹನೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತ ಹಾಗೂ ಉರಗ ತಜ್ಞ ಮಧು ಹಾಗೂ ಮಹದೇವಸ್ವಾಮಿ ರವರನ್ನು ಸನ್ಮಾನಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಗೌರವಾಧ್ಯಕ್ಷ ದೇವರಾಜು ನಾಯ್ಡು, ಪ್ರಧಾನ ಕಾರ್ಯದರ್ಶಿ ಬಸವರಾಜು, ಸಹ ಕಾರ್ಯದರ್ಶಿ ಗೋವಿಂದ, ಖಜಾಂಚಿ ಮಹದೇವಸ್ವಾಮಿ, ಜಿಲ್ಲಾ ನಿರ್ದೇಶಕರುಗಳಾದ ಪ್ರಭುಸ್ವಾಮಿ, ಸುರೇಶ್ ನಿರ್ದೇಶಕರುಗಳಾದ ಸೋಮಶೇಖರ್, ಮಧು ಸದಸ್ಯರುಗಳಾದ ರಾಜೇಶ್, ಮಹದೇವಸ್ವಾಮಿ, ಅಭಿಲಾಶ್, ವಿಜಯಕುಮಾರ್, ಮಹಾದೇವ, ನಿರಂಜನ್, ರವಿ, ಶಿವಕುಮಾರ್, ನಾಗೇಂದ್ರ, ಲಿಂಗರಾಜು ಕರಿಯನಪುರ, ಛಾಯಾಗ್ರಾಹಕ ಶಿವಶಂಕರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Tags:
error: Content is protected !!