Mysore
16
scattered clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಶ್ವಾನ ಉಳಿಸಲು ಹೋಗಿ ವ್ಯಕ್ತಿ ಸಾವು

person dies electric shock

ಚಾಮರಾಜನಗರ: ವಿದ್ಯುತ್ ಆಘಾತಕ್ಕೆ ಒಳಗಾಗಿದೆ ಎಂಬುದು ತಿಳಿಯದೇ ತನ್ನ ಶ್ವಾನವನ್ನು ಏಕಾಏಕಿ ಉಪಚರಿಸಲು ಹೋಗಿ ಶ್ವಾನದ ಜೊತೆ ಅದರ ಒಡೆಯನೂ ವಿದ್ಯುತ್ ಪ್ರವಹಿಸಿ ಮೃತಪಟ್ಟಿರುವ ಘಟನೆ ನಗರದ ಜಾಲಹಳ್ಳಿಹುಂಡಿ ಹೊಸ ಬಡಾವಣೆಯಲ್ಲಿ ಬುಧವಾರ ನಡೆದಿದೆ.

ಜಾಲಹಳ್ಳಿ ಹುಂಡಿ ಚಂದ್ರುಗೌಡ (38) ಮೃತಪಟ್ಟವರು. ಮನೆ ಮುಂಭಾಗದ ಖಾಲಿ ನಿವೇಶನಕ್ಕೆ ಹಾಕಿರುವ ತಂತಿ ಬೇಲಿಗೆ ಸಿಲುಕಿ ಶ್ವಾನ ಸತ್ತ ಸ್ಥಿತಿಯಲ್ಲಿ ಬಿದ್ದಿತ್ತು. ಬೆಳಗಿನ ಜಾವ ಆಗ ತಾನೇ ಮನೆಯಿಂದ ಆಚೆ ಬಂದ ಚಂದ್ರುಗೌಡ ಅವರು ಶ್ವಾನ ಬಿದ್ದಿದ್ದ ಸ್ಥಿತಿಯನ್ನು ನೋಡಿ ದಿಗಿಲುಗೊಂಡು ಅದನ್ನು ದಿಢೀರನೆ ಉಪಚರಿಸಲು ಹೋದಾಗ ಶ್ವಾನಕ್ಕೆ ತಗುಲಿದ್ದ ವಿದ್ಯುತ್ ಇವರಿಗೂ ಪ್ರವಹಿಸಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:-  ಮನೆ ಮೇಲೆ ಉರುಳಿದ ಮರ, ವಿದ್ಯುತ್‌ ಕಂಬ: ತಪ್ಪಿದ ಭಾರೀ ಅನಾಹುತ

ಘಟನಾ ಸ್ಥಳದಲ್ಲಿ ಕಬ್ಬಿಣದ ವಿದ್ಯುತ್ ಕಂಬವಿದೆ. ಜೊತೆಗೆ, ಈ ತಂತಿ ಬೇಲಿಗೆ ತಾಗಿಕೊಂಡಂತೆ ಸುಮಾರು ಒಂದು ಕಿ.ಮೀ. ಉದ್ದದವರೆಗೂ ಸಂಬಂಧಿಸಿದವರು ಅವರವರ ಜಾಗಕ್ಕೆ ತಂತಿಬೇಲಿ ಹಾಕಿಕೊಂಡಿದ್ದಾರೆ. ಹಾಗಾಗಿ ಯಾವ ಕಡೆಯಿಂದ ತಂತಿ ಬೇಲಿಗೆ ವಿದ್ಯುತ್ ಪ್ರವಹಿಸಿದೆ ಎಂಬುದರ ಕುರಿತು ಪರಿಶೀಲನೆ ಮಾಡಲಾಗುತ್ತಿದೆ. ಕಬ್ಬಿಣದ ವಿದ್ಯುತ್ ಕಂಬ ಇರುವುದರಿಂದ ಯಾವುದಾದರೂ ತಂತಿ ಕಳಚಿ ಅದಕ್ಕೆ ಟಚ್ ಆಗಿ ಘಟನೆ ನಡೆದಿರಬಹುದು ಎಂದೂ ಹೇಳಲಾಗುತ್ತಿದೆ.

ಸ್ಥಳಕ್ಕೆ ವಿದ್ಯುತ್ ಪರಿವೀಕ್ಷಕರಾದ ಸ್ವಪ್ನಾ , ಸೆಸ್ಕ್ ಎಇಇ ಮಹೇಶ್, ಎಇ ಪ್ರವೀಣ್, ಜೆಇ ಮಂಜುನಾಥ್ ಮತ್ತು ಸಿಬ್ಬಂದಿ ಭೇಟಿ ನೀಡಿದ್ದರು. ಮೃತರ ಕುಟುಂಬ ವರ್ಗದವರಿಗೆ ಇಲಾಖೆಯಿಂದ ನಿಯಮಾನುಸಾರ 5 ಲಕ್ಷ ರೂ. ಪರಿಹಾರ ನೀಡಲು ಅವಕಾಶವಿದೆ. ಮಾನವೀಯ ದೃಷ್ಟಿಯಿಂದ ತಾತ್ಕಾಲಿಕವಾಗಿಯೂ ಬುಧವಾರ ಪರಿಹಾರ ಧನ ನೀಡಲಾಗಿದೆ ಎಂದು ಸೆಸ್ಕ್ ಅಧಿಕಾರಿಯೊಬ್ಬರು ತಿಳಿಸಿದರು. ಈ ಮಧ್ಯೆ, ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿದರು.

ಓದಿನ ವಿಸ್ತಾರ:- ಪಂಜು ಗಂಗೊಳ್ಳಿ ಅವರ ಅಂಕಣಗಳನ್ನು ಓದಲು ಈ ಲಿಂಕ್‌ ಬಳಸಿ

Tags:
error: Content is protected !!