Mysore
14
broken clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಆಕ್ಸಿಜನ್ ದುರಂತ : ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಸಂತ್ರಸ್ತೆಯರಿಂದ ಪತ್ರ

ಚಾಮರಾಜನಗರ : ಮೂರು ವರ್ಷಗಳ ಹಿಂದೆ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಆಕ್ಸಿಜನ್‌ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬದ ಸದಸ್ಯರು ವೇತನ , ಉದ್ಯೋಗ ಭದ್ರತೆ ಇಲ್ಲದೆ ಕಣ್ಣೀರು ಹಾಕುತ್ತಿದ್ದು, ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.

ನೆಪ ಮಾತ್ರಕ್ಕೆ ಒಂಭತ್ತು ಮಂದಿಗೆ ಹೊರಗುತ್ತಿಗೆ ಆಧಾರದಲ್ಲಿ ಡಿ ಗ್ರೂಪ್‌ ನೌಕರಿ ನೀಡಲಾಗಿದೆ. ಆದರೆ ಯಾವುದೇ ಪ್ರತಿ ನೀಡದೆ ಬರಿ ಮೌಖಿಕ ಆದೇಶದ ಮೇಲೆ ಜಿಲ್ಲಾಡಳಿತ ಕೆಲಸ ನೀಡಿದೆ . ೩ ತಿಂಗಳು ವೇತನ ನೀಡಿ ೪ ತಿಂಗಳು ವೇತನ ಬಾಕಿ ಉಳಿಸಿಕೊಂಡಿದೆ. ಅತ್ತ ಕೂಲಿ ಕೆಲಸಕ್ಕೂ ಹೋಗುವುದಕ್ಕೆ ಆಗುತ್ತಿಲ್ಲ. ಇತ್ತ ಹೊರ ಗುತ್ತಿಗೆ ಕೆಲಸ ಮಾಡಲಾಗದೆ ಜೀವನ ನಡೆಸುವುದು ಕಷ್ಟವಾಗಿದೆ. ಹೀಗಾಗಿ ನಮಗೆ ದಯಾಮರಣ ಕರುಣಿಸಿ ಎಂದು ಸಂತ್ರಸ್ತೆಯರು ಕಣ್ಣೀರು ಹಾಕಿದ್ದಾರೆ.

೨೦೨೧ ರ ಮೇ ೨ ರಂದು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್‌ ದುರಂತದಲ್ಲಿ ೩೬ ಮಂದಿ ಸಾವನ್ನಪ್ಪಿದ್ದರು. ೨೦೨೨ ರ ಸೆಪ್ಟೆಂಬರ್‌ ನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭಾರತ್‌ ಜೋಡೋ ಪಾದಯಾತ್ರೆಗೆ ಗುಂಡ್ಲುಪೇಟೆಗೆ ಬಂದಾಗ ಸಂತ್ರಸ್ಥರೊಂದಿಗೆ ಸಂವಾದ ನಡೆಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಸರ್ಕಾರಿ ನೌಕರಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರವು ಸಂತ್ರಸ್ತರ ಕಡೆ ತಿರುಗಿಯೂ ನೋಡಿಲ್ಲ.  ಸಂತ್ರಸ್ತೆಯರ ಹೋರಾಟದ ನಂತರ ಕೇವಲ ೯ ಮಂದಿಗೆ ಜಿಲ್ಲಾಡಳಿತ ಐದು ತಿಂಗಳ ಹಿಂದೆ ಹೊರಗುತ್ತಿಗೆ ಆಧಾರದಲ್ಲಿ ಡಿ ಗ್ರೂಪ್‌ ನೌಕರಿ ನೀಡಿತು. ಆದರೆ ಫೆಬ್ರವರಿ ತಿಂಗಳು ಹೊರತು ಪಡಿಸಿದರೆ ನಾಲ್ಕು ತಿಂಗಳಿಂದ ವೇತನ ನೀಡಿಲ್ಲ. ಉದ್ಯೋಗ ಭದ್ರತೆಯನ್ನು ಸಹ ನೀಡಿಲ್ಲ. ಕೇವಲ ಮೌಖಿಕ ಸೂಚನೆ ಮೇರೆಗೆ ವಿವಿಧ ಇಲಾಖೆಯ ಕಚೇರಿಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸಂತ್ರಸ್ತರು ಕೆಲಸ ಮಾಡುತ್ತಿದ್ದಾರೆ. ಇನ್ನಾದ್ರೂ ಸರ್ಕಾರ ಎಚ್ಚೆತ್ತು ಕೊಂಡು ಸಂತ್ರಸ್ತೆಯರಿಗೆ ಖಾಯಂ ಉದ್ಯೋಗ ನೀಡುತ್ತಾರಾ ಎಂಬುವುದನ್ನ ಕಾದುನೋಡಬೇಕಾಗಿದೆ.

Tags:
error: Content is protected !!