Mysore
27
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಪಕ್ಷಾತೀತವಾದ ಬೆಂಬಲ ನನ್ನ ಮಗನಿಗೆ ಸಿಕ್ಕಿದೆ ಡಾ ಎಚ್ ಸಿ ಮಹದೇವಪ್ಪ !

ಚಾಮರಾಜನಗರ : ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದುರಿವ ತಮ್ಮ ಪುತ್ರ ಸುನೀಲ್ ಬೋಸ್ ಗುಲುವು ನಿಶ್ಚಿತ ಎಂದ ಡಾ ಎಚ್ ಸಿ ಮಹದೇವಪ್ಪ ಅವರು ಗೆಲುವಿಗೆ ಪಕ್ಷಾತೀತವಾದ ಬೆಂಬಲ ಕ್ಷೇತ್ರದಾದ್ಯಂತ ಕಂಡು ಬಂದಿರುವದು ಸಂತೋಷದ ವಿಚಾರ ಎಂದರು.

ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ತಮ್ಮ ಹುಟ್ಟೂರು ಹದಿನಾರಿಗೆ ಪುತ್ರ ಸುನೀಲ್ ಬೋಸ್ ರೊಂದಿಗೆ ಆಗಮಿಸಿದ್ದ ಅವರು ಮತಗಟ್ಟೆಗೆ ತೆರಳುವ ಮೊದಲು ಆಂದೋಲನದೊಂದಿಗೆ ಮಾತನಾಡಿದರು,
ಈ ಬಾರಿ ಇಲ್ಲಿ ಕೈ ಗೆಲುವು ನಿಶ್ಚಿತ ಎಂದ ಅವರು, ಬಾರಿ ಅಂತರದಿಂದ ಇಲ್ಲಿ ನಾವು ಜಯಗಳಿಸುತ್ತೇವೆ.

ಚಾಮರಾಜನಗರ ಕೈ ನ ಭದ್ರಕೋಟೆಯಾಗಿ ಉಳಿದಿದೆ ಇದಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೇಸ್ ಶಾಸಕರು ಹಾಗೂ ಮುಖಂಡರ ಪರಿಶ್ರಮವೂ ಕಾರಣ ಎಂದ ಮಹದೇವಪ್ಪ, ಬಿಜೆಪಿ ಸಂವಿಧಾನ ವಿರೊಧಿ ಆಡಳಿದಿಂದ ಜನತೆಗೆ ಭ್ರಮ ನಿರಸನವಾಗಿದೆ ಅಂತೆಯೇ ಕಾಂಗ್ರೇಸ್  ನೀಡಿದ ಬರವಸೆಗಳನ್ನು ಗ್ಯಾರಂಟಿಯಾಗಿ ಈಡೇರಿಸುತ್ತಿರುವ ಮೂಲಕ ಮತದಾರರ ಮನ ಸೇಳಿದಿದೆ ಎಂದು ಮಹದೇವಪ್ಪ ವ್ಯಾಖ್ಯಾನಿಸಿದರು.

ಈ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ಗೆ ಸ್ಪರ್ಧೆ ಕಾಣುತ್ತಿಲ್ಲ ಮೈಸೂರಲ್ಲಿ ಮಾತ್ರ ನಮ್ಮ ಹಾಗೂ ಬಿಜೆಪಿ ನಡುವೆ ಗೆಲುವಿಗಾಗಿ ಹೋರಟವಿದ್ದು ಅಂತಿಮ ಜುಯ ನಮ್ಮದು ಎಂದು ಅವರು ತಿಳಿಸಿದರು.

ನಂಜನಗೂಡು ಸೇರಿದಂತೆ ಅನೇಕ ಕಡೆ ಬಿಜೆಪಿ ಮುಖಂಡರು ತೆರೆಮರೆಯಲ್ಲಿ ನಿಮ್ಮನ್ನು ಬೆಂಬಲಸಿದ್ದಾರಂತೆ ಎಂದಾಗ ಪ್ರತಿಕ್ರೀಯಿಸಿದ ಅವರು ಇರಬಹುದು ವಯಕ್ತಿಕ ಸ್ನೆಹವೂ ಕೆಲಸ ಮಾಡಿರಬಹುದು ಅದಕ್ಕಾಗಿ ವಿರೋಧ ಪಕ್ಷದ ಗೆಳೆಯರಿಗೆ ಅಭಿನಂದನೆ ಸಲ್ಲಿಸುವುದಾಗಿ ಮಾರ್ಮಿಕವಾಗಿ ನುಡಿದರು.

 

Tags:
error: Content is protected !!