ಆರೋಪಿಗಳ ವಿರುದ್ದ ಕ್ರಮಕ್ಕೆ ಪ್ರಾಣಿಪ್ರೀಯರ ಒತ್ತಾಯ
ಗುಂಡ್ಲುಪೇಟೆ: ತಾಲ್ಲೂಕಿನ ಕಂದೇಗಾಲ- ಕೊಡಸೋಗೆ ರಸ್ತೆಯಲ್ಲಿ ಸುಮಾರು ಇಪ್ಪತ್ತಕ್ಕು ಹೆಚ್ಚು ಕೋತಿಗಳನ್ನು ಕೊಂದು ಗೋಣಿ ಚೀಲದಲ್ಲಿ ತಂದು ಆರೊಪಿಗಳು ರಸ್ತೆಯ ಬದಿ ಎಸೆದು ಹೋಗಿದ್ದರು.
ಈಗ ಕೋತಿಗಳ ಮರಣೋತ್ತರ ಪರೀಕ್ಷೆಯ ನಂತರ ಆರೋಪಿಗಳು ಕೋತಿಗಳಿಗೆ ವಿಷ ನೀಡಿ ಅರೆಪ್ರಜ್ಞೆಯಲ್ಲಿದ್ದ ಕೋತಿಗಳಿಗೆ ಮಾರಣಾಂತಿಕವಾಗಿ ಹೊಡೆದು ಕೊಂದಿದ್ದಾರೆ ಎಂಬ ಬಗ್ಗೆಯೂ ಮಾಹಿತಿ ಹೊರಬಿದ್ದಿದ್ದು ಇಂತಹ ಕೃತ್ಯ ಎಸಗಿದ ಆರೋಪಿಗಳನ್ನು ಕಂಡು ಹಿಡಿದ ಶಿಕ್ಷಿಸುವಂತೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಕೇಳಿಬರುತ್ತಿದೆ.
ಹಿಂದುಗಳು ಪೂಜಿಸುವ ಆಂಜನೇಯನ ಪ್ರತಿರೂಪವಾದ ವಾನರ ಸೈನ್ಯವನ್ನಯ ಹೊಡೆದು ವಿಷಹಾಕಿ ಕೊಂದಿರುವ ಪಾಪಿಗಳ ಮೇಲೆ ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕು ಸ್ಕಂದಗಿರಿ ಪಾರ್ವತಾಂಭೆ ಸನ್ನಿದಿಯಲ್ಲಿ ಇಂತಹ ಘಟನೆ ನಡೆದಿದ್ದು ತನಿಖೆ ಚುರುಕುಗೊಳಿಸಿ ಆರೋಪಿಗಳನ್ನು ಬಂಧಿಸುವಂತೆ ಪ್ರಾಣಿ ಪ್ರೀಯರು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಗ್ರಾಮಸ್ಥ ಆನಂದ್ ಹೇಳುವ ಪ್ರಕಾರ ರಾತ್ರಿ ಕೊತಿಗಳು ಬಿದ್ದ ಜಾಗದಲ್ಲಿ ಮೊಬೈಲ್ ನೆಟ್ ವರ್ಕ್ ಚಲನವಲನ ಕಂಡು ಹಿಡಿದರೆ ಆರೋಗಳನ್ನು ಕಂಡುಹಿಡಿಯಬಹುದು ಒಟ್ಟಾರೆ ಇಪ್ಪತ್ತು ಹೆಚ್ಚು ಸತ್ತಿರುವ ಕೋತಿಗಳ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಆರೋಪಿಗಳನ್ನು ಕಂಡುಹಿಡಿಯಲೇ ಬೇಕು.
20 ಕ್ಕೂ ಹೆಚ್ಚು ಕೋತಿಗಳನ್ನು ವಿಷಹಾಕಿ ಹಾಗೂ ಹೊಡೆದು ಕೊಂದಿರುವ ಬಗ್ಗೆ ವೈದ್ಯಕೀಯ ವರದಿಯಲ್ಲಿ ಧೃಡಪಟ್ಟಿದ್ದು ಆರೊಪಿಗಳು ಯಾರು ಎಂದು ತಿಳಿದು ಬಂದಿಲ್ಲ, ಅಲ್ಲಿ ಯಾವುದೇ ಸಿಸಿ ಕ್ಯಾಮರಾಗಳ ರಸ್ತೆಗೆ ಪೊಕಸ್ ಹಾಗದೆ ಇರುವುದರಿಂದ ಆರೊಪಿಗಳ ಬಗ್ಗೆ ಮಾಹಿತಿ ಇಲ್ಲ ಆರೋಪಿಗಳನ್ನು ಕಂಡು ಹಿಡಿಯುವ ಪ್ರಯತ್ನ ಮಾಡುತಿದ್ದೇವೆ ಎಂದು ಗುಂಡ್ಲುಪೇಟೆ ಅರಣ್ಯ ವಲಯ ಅಧಿಕಾರಿ ಶಿವಕುಮಾರ್ ತಿಳಿಸಿದರು.





