ಚಾಮರಾಜನಗರ: ತಾಲ್ಲೂಕಿನ ಅಮಚವಾಡಿ ಗ್ರಾಮದಲ್ಲಿ ಸಿಡಿಮದ್ದು ಸಿಡಿದು ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಸಿಡಿಮದ್ದು ಸಿಡಿದು ಪೆದ್ದಿ ಅಲಿಯಾಸ್ ಪ್ರದೀಪ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾಡುಹಂದಿಗಳ ಬೇಟೆಗಾಗಿ ಮನೆಯಲ್ಲಿ ಸಿಡಿಮದ್ದು ಸಂಗ್ರಹಿಸಿಟ್ಟಿದ್ದರು.
ಪ್ರದೀಪ್ ಅಕ್ರಮವಾಗಿ ಸಿಡಿಮದ್ದು ಸಂಗ್ರಹಿಸಿಟ್ಟಿದ್ದು, ಅದು ಸಿಡಿದು ಪ್ರದೀಪ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಆತನನ್ನು ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





