ಚಾಮರಾಜನಗರ: ಹನೂರು ಹಾಗೂ ಕೊಳ್ಳೆಗಾಲ ಸೇರಿದಂತೆ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ ಪಕ್ಷಿಗಳ ಸಂತತಿ ಹೆಚ್ಚಾದ ಹಿನ್ನಲೆಯಲ್ಲಿ ಅವುಗಳ ನಿಖರ ಮಾಹಿತಿ ತಿಳಿಯಲು ಎರಡು ದಿನಗಳ ಕಾಲ ನಡೆದ ಪಕ್ಷಿಗಣತಿ ಅಂತ್ಯವಾಗಿದೆ.
ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ 7 ಅರಣ್ಯವಲಯಗಳ ಒಟ್ಟು 949.460 ಚ.ಕಿ.ಮೀ. ನಷ್ಟು ಅರಣ್ಯ ಪ್ರದೇಶದಲ್ಲಿ ಪಕ್ಷಿಗಳ ಗಣತಿ ನಡೆಯಿತು. ಈ ಗಣತಿಯಲ್ಲಿ 500ಕ್ಕೂ ಅಧಿಕ ಮಂದಿ ಪಕ್ಷಿ ವೀಕ್ಷಕರು ಹಾಗೂ ಪಕ್ಷಿ ತಜ್ಞರು ಸೇರಿದಂತೆ ಅಕ್ಕಪಕ್ಕದ ಹಳ್ಳಿಗಳ ಜನರು ಭಾಗಿಯಾಗಿದ್ದರು.
ಈ ಪ್ರದೇಶದಲ್ಲಿ 253 ಪ್ರಭೇದದ ಪಕ್ಷಿಗಳು ಪತ್ತೆಯಾಗಿವೆ. ರಣಹದ್ದುಗಳು, ಮರಕುಟಿಗ, ನೀಲಗಿರಿ, ಪಾರಿವಾಳಗಳು ಸೇರಿದಂತೆ 253 ಪ್ರಭೇದದ ಪಕ್ಷಿಗಳು ಕಂಡುಬಂದಿವೆ.