ಗುಂಡ್ಲುಪೇಟೆ : ಪಟ್ಟಣದ ಗುಂಡ್ಲುಪೇಟೆಯಿಂದ ಕೇರಳಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿಯ ಸಾರ್ವಜನಿಕ ಆಸ್ಪತ್ರೆಯ ಎದುರು ನಿರ್ಮಾಣವಾಗುತ್ತಿರುವ ನಿಸರ್ಗ ಲೇಔಟ್ ಬಳಿ ಮರಿಯೊಂದಿಗೆ ಚಿರತೆ ಪ್ರತ್ಯಕ್ಷವಾಗಿದೆ ಇದನ್ನು ಗಮನಿಸಿದ ವಾಹನ ಸವಾರರು ಭಯಭೀತರಾಗಿದ್ದಾರೆ.
ಸದಾ ಜನರು ಗಿಜಿಗುಡುವ ಪಟ್ಟಣಕ್ಕೆ ಚಿರತೆ ಬಂದಿರುವುದೇ ಆಶ್ಚರ್ಯ, ಆಗಾಗಿ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಬೋನ್ ಇರಿಸಿ ಚಿರತೆ ಸೆರೆ ಹಿಡಿದು ಕಾಡಿಗೆ ಬಿಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ರಸ್ತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀದಿ ದೀಪ ಉರಿಯದ ಕಾರಣ ಪ್ರಾಣಿಗಳು ವಾಹನ ಸವಾರರ ಮೆಲೆ ಎರಗಿದರೆ ಯಾರು ಹೊಣೆ ವಿದ್ಯುತ್ ಇಲ್ಲದ ಕಾರಣ ಕೊಳ್ಳತನ ಹಿಟ್ ಅಂಡ್ ರನ್ ಅಪಘಾತ ನಡೆದರೆ ಅರೊಪಿಗಳು ಪರಾರಿಯಾಗುವ ಸಾದ್ಯತೆ ಇದ್ದು ಕುಡಲೆ ಪುರಸಭೆಯವರು ಇಲ್ಲ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಕೂಡಲೇ ವಿದ್ಯುತ್ ಸಂಪರ್ಕ ನಿಡುವಂತೆ ಜಾವಲುಪಡೆ ಅದ್ಯಕ್ಷ ಅಬ್ದುಲ್ ಮಾಲಿಕ್ ಒತ್ತಾಯಿಸಿದರು.





