Mysore
20
scattered clouds

Social Media

ಶನಿವಾರ, 24 ಜನವರಿ 2026
Light
Dark

ಕಾಳನಹುಂಡಿ | ಬಸ್‌ ಸೌಕರ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ

Kalanahundi | Protest demanding better bus facilities

ಚಾಮರಾಜನಗರ: ತಾಲ್ಲೂಕಿನ ಕಾಳನಹುಂಡಿ ಗ್ರಾಮಕ್ಕೆ ಹೆಚ್ಚುವರಿ ಸಾರಿಗೆ ಬಸ್‌ಗಳನ್ನು ಓಡಿಸುವಂತೆ ಆಗ್ರಹಿಸಿ ಗ್ರಾಮದ ಸಂಚಾರ ಮಾರ್ಗದಲ್ಲಿ ಗ್ರಾಮಸ್ಥರು, ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ಮಾಡಿದರು.

ಚಾಮರಾಜನಗರದಿಂದ ಕಲ್ಪುರ ಮಾರ್ಗವಾಗಿ ಕಾಳನಹುಂಡಿ ಗ್ರಾಮಕ್ಕೆ ಬರುವ ಸಾರಿಗೆ ಬಸ್ ಗಳು ದಿನಾಲೂ ಜನರಿಂದ ತುಂಬಿ ಹೋಗುತ್ತಿದ್ದು ಜನರು ಬಸ್ ಹತ್ತಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕಾಳನಹುಂಡಿ ಗ್ರಾಮದ ವಿದ್ಯಾರ್ಥಿಗಳು, ಸಾರ್ವಜನಿಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಬಸ್ ಪ್ರಯಾಣದಿಂದಲೇ ದೂರ ಉಳಿದು ತೊಂದರೆ ಪಡುವಂತಾಗಿದೆ. ಈ ವಾಸ್ತವ ಸ್ಥಿತಿಯ ಅರಿವು ಇದ್ದರೂ ಕೆಎಸ್ಸಾರ್ಟಿಸಿ ಅಧಿಕಾರಿಗಳು ಹೆಚ್ಚುವರಿ ಬಸ್ ಓಡಿಸಲು ಯಾವುದೇ ಕ್ರಮ ವಹಿಸದಿರುವುದರಿಂದ ಬೇಸತ್ತು ಪ್ರತಿಭಟನೆಗೆ ಇಳಿದಿರುವುದಾಗಿ ತಿಳಿಸಿದರು.

ಕಾಳನಹುಂಡಿ ಹಾಗೂ ಕಲ್ಪುರ ಗ್ರಾಮಗಳಿಗೆ ಪ್ರತ್ಯೇಕವಾಗಿ ಸಾರಿಗೆ ಬಸ್‌ಗಳನ್ನು ಓಡಿಸಿ ಜನರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಡಿಪೋ ಮ್ಯಾನೇಜರ್ ಕುಮಾರನಾಯಕ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಅಹವಾಲು ಆಲಿಸಿದರು. ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಕೈಬಿಟ್ಟರು.

Tags:
error: Content is protected !!