ಕೊಳ್ಳೇಗಾಲ : ಹಳೇ ಹಂಪಾಪುರದ ಸುವರ್ಣಾವತಿ ನದಿ ದಡದಲ್ಲಿ ಕೈ ಕಾಣುವಂತೆ ಹೂತಿದ್ದ ಮಹಿಳೆಯ ಶವದ ಗುರುತು ಪತ್ತೆಯಾಗಿದೆ.
ಈಕೆ ಕೊಳ್ಳೇಗಾಲ ಮೋಳೆ ಬಡಾವಣೆಯ ವಿಜಯ್ ಕುಮಾರ್ ಅವರ ಪತ್ನಿ ಸೋನಾಕ್ಷಿ (29) ಎಂದು ಗುರುತಿಸಲಾಗಿದೆ.
ಪೊಲೀಸರ ವಿಚಾರಣೆಯ ನಂತರ ಈಕೆ ಅದೇ ಬಡಾವಣೆಯ ಮಹೇಶ್ ಹಾಗೂ ಬಾಬು ಎಂಬವರ ಜೊತೆ ಅನೈತಿಕ ಸಂಬಂಧ ಹೊಂದಿದ್ದರು ಎಂದು ತಿಳಿದುಬಂದಿದೆ. ಈ ಕುರಿತು ಆಕೆಯ ಪತಿ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದಾರೆ.
ಮೃತರ ಪತಿ ನೀಡಿದ ದೂರಿನ ಮೇರೆಗೆ ಪೊಲೀಸರು ಮಹಿಳೆಯನ್ನು ಕೊಲೆ ಮಾಡಿರುವರು ಯಾರು? ಏಕೆ ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಕ್ರಮವಾಗಿ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ಶವವನ್ನು ಹೆಚ್ಚು ಆಳದಲ್ಲಿ ಹೂಳದೆ ಮಣ್ಣು ಮುಚ್ಚಿದ್ದರಿಂದ ನಾಯಿಗಳು ಸಮಾಧಿ ಮಣ್ಣನ್ನು ತೆರೆದು ಕೈ ಬೆರಳುಗಳನ್ನು ಕಚ್ಚಿವೆ. ಇದು ವಾಮಾಚಾರವಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಚಾ.ನಗರ ಸಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ, ವಾರಸುದಾರರಿಗೆ ನೀಡಿದ್ದಾರೆ. ಸರ್ಕಲ್ ಇನ್ಸ್‌ಪೆಕ್ಟರ್ ತನಿಖೆಯನ್ನು ನಡೆಸುತ್ತಿದ್ದಾರೆ.





