Mysore
23
scattered clouds

Social Media

ಬುಧವಾರ, 26 ಆಗಸ್ಟ್ 2026
Light
Dark

ಮಾರ್ಚ್.‌25ರಂದು ಹಿಮವದ್‌ ಗೋಪಾಲಸ್ವಾಮಿ ರಥೋತ್ಸವ

ಗುಂಡ್ಲುಪೇಟೆ: ತಾಲ್ಲೂಕಿನ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದಲ್ಲಿ ಇದೇ ಮಾರ್ಚ್.‌25ರಂದು ಯುಗಾದಿ ಜಾತ್ರೆ ಹಾಗೂ ಬ್ರಹ್ಮರಥೋತ್ಸವ ಜರುಗಲಿದೆ.

ರಥೋತ್ಸವದ ಅಂಗವಾಗಿ ನಾಳೆ ಕಲ್ಯಾಣೋತ್ಸವ ಜರುಗಲಿದೆ. ಮಾರ್ಚ್.‌25ರಂದು ಬ್ರಹ್ಮರಥೋತ್ಸವ ನಡೆಯಲಿದ್ದು, 26ರಂದು ಗರುಡೋತ್ಸವ ಹಾಗೂ ಶಯನೋತ್ಸವ ಜರುಗಲಿದೆ. ಮಾರ್ಚ್.‌27ರಂದು ಸಂಧಾನ ಲೀಲೋತ್ಸವ, ಪೂರ್ಣಾಹುತಿ ಮತ್ತು 28ರಂದು ಮಹಾಭಿಷೇಕ, ಮಹಾಮಂಗಳಾರತಿ, ದ್ವಾದಶಾರಾಧನಾ, ಧ್ವಜಾವರೋಹಣ ನಡೆಸುವ ಮೂಲಕ ಪೂಜಾ ಕೈಂಕರ್ಯಗಳು ಸಂಪನ್ನಗೊಳ್ಳಲಿವೆ.

ಇನ್ನು ಬೆಟ್ಟದಲ್ಲಿ ರಥೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ರಥೋತ್ಸವಕ್ಕೆ ರಾಜ್ಯ ಮಾತ್ರವಲ್ಲದೇ ನೆರೆ ರಾಜ್ಯ ಹಾಗೂ ದೇಶ ವಿದೇಶಗಳಿಂದ ಜನರು ಆಗಮಿಸಲಿದ್ದಾರೆ.

ಬೆಟ್ಟದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಪ್ಲಾಸ್ಟಿಕ್‌ ವಸ್ತುಗಳಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ.

 

Tags:
error: Content is protected !!