ಹನೂರು : ತಾಲ್ಲೂಕಿನ ದೊಡ್ಡಾಲತ್ತೂರು, ಅಜ್ಜೀಪುರ ಸುತ್ತಮುತ್ತಲೂ ಜಿಎಸ್‌ಐ ಅಧಿಕಾರಿಗಳು ಚಿನ್ನದ ನಿಕ್ಷೇಪ ಇರುವ ಬಗ್ಗೆ ಅಧ್ಯಯನಕ್ಕೆ ಮುಂದಾಗುತ್ತಿದ್ದಂತೆ ಚಿನ್ನದಾಸೆಗಾಗಿ ಕೆಲ ಕಿಡಿಗೇಡಿಗಳು ಗುಡ್ಡವನ್ನೇ ಅಗೆದಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೊಡ್ಡಾಲತ್ತೂರು ಗ್ರಾಪಂನ ಸರ್ಕಾರಿ ಗುಡ್ಡವನ್ನು ಅಗೆದಿದ್ದು ಭಾನುವಾರ ವಿಚಾರ ಬೆಳಕಿಗೆ ಬಂದಿದೆ. 90 ಸೆಂಟ್‌ಗೂ ಅಧಿಕ ವಿಸ್ತೀರ್ಣದ ಗುಡ್ಡಗಳನ್ನು ಚಿನ್ನ ಸಿಗಬಹುದೆಂದು ಅಗೆದಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ತನಿಖೆ ನಡೆಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ ಅಧಿಕಾರಿಗಳು ರಾಜ್ಯದ ನಾನಾ ಭಾಗಗಳಲ್ಲಿ ಖನಿಜ ನಿಕ್ಷೇಪಗಳ ಲಭ್ಯತೆ ಬಗ್ಗೆ ಸಮೀಕ್ಷೆ ನಡೆಸುತ್ತಿದ್ದು ಅದರಂತೆ ದೊಡ್ಡಾಲತ್ತೂರು, ಅಜ್ಜೀಪುರ ಸುತ್ತಮುತ್ತಲೂ ಅಧ್ಯಯನ ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.





