Mysore
27
light rain

Social Media

ಭಾನುವಾರ, 27 ಸೆಪ್ಟೆಂಬರ್ 2026
Light
Dark

ಹನೂರು | ಅರಣ್ಯದಲ್ಲಿ 292 ಗಾಂಜಾ ಗಿಡಗಳು ಪತ್ತೆ ; 213 ಕೆಜಿ ಗಾಂಜಾ ವಶ

ಹನೂರು : ತಾಲೂಕಿನ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ದೊಡ್ಡಸಂಪಿಗೆ ಅರಣ್ಯ ಪ್ರದೇಶದ ಕೂಳಿಹಟ್ಟಿ ಭಾಗದ ಬೆಳ್ಳಾಜಿ ಬೀಟ್‌ನಲ್ಲಿ ಅಕ್ರಮವಾಗಿ ಬೆಳೆದಿದ್ದ 292 ಗಾಂಜಾ ಗಿಡಗಳನ್ನು ಅಬಕಾರಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.

ಸೆ.26ರ ಭಾನುವಾರ ಅಬಕಾರಿ ಜಂಟಿ ಆಯುಕ್ತರು, ಮೈಸೂರು ವಿಭಾಗದ ಬಸವರಾಜ ಹಡಪದ, ಬಿಆರ್‌ಟಿ ಡಿಸಿಎಫ್ ಶ್ರೀಪತಿ, ಅಬಕಾರಿ ಉಪ ಆಯುಕ್ತರು ಚಂದ್ರ ಪಿ.ಇವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ವಿಜಯ್ ಕುಮಾರ್ ಕೆ.ಟಿ, ಅಬಕಾರಿ ಉಪ ಅಧೀಕ್ಷಕರು, ದಯಾನಂದ ಸಿ.ಎಂ, ಅಬಕಾರಿ ನಿರೀಕ್ಷಕರು, ಕೊಳ್ಳೇಗಾಲ ವಲಯ, ಉಮಾಶಂಕರ್, ಅಬಕಾರಿ ನಿರೀಕ್ಷಕರು, ಚಾಮರಾಜನಗರ ಉಪ ವಿಭಾಗ, ದೇವರಾಜು, ವಲಯ ಅರಣ್ಯಾಧಿಕಾರಿಗಳು, ಬೈಲೂರು ವಲಯ, ರಾಜೇಶ್, ಉಪ ವಲಯ ಅರಣ್ಯಾಧಿಕಾರಿಗಳು ನೇತೃತ್ವದಲ್ಲಿ ದೊಡ್ಡಸಂಪಿಗೆ ಅರಣ್ಯ ಪ್ರದೇಶದಲ್ಲಿ ಗಾಂಜಾ ಬೆಳೆದಿರುವ ಮಾಹಿತಿ ಮೇರೆಗೆ ಕೂಂಬಿಂಗ್ ನಡೆಸಲಾಗಿದೆ.

ಕಾರ್ಯಾಚರಣೆಯಲ್ಲಿ ಒಟ್ಟು 5 ರಿಂದ 11 ಅಡಿ ಎತ್ತರದ 292 ಗಾಂಜಾ ಗಿಡಗಳು ಅರಣ್ಯ ಪ್ರದೇಶದಲ್ಲಿ ಬೆಳೆದಿರುವುದು ಪತ್ತೆಯಾಗಿದೆ. ಎಲ್ಲಾ ಗಿಡಗಳನ್ನು ತೂಕ ಮಾಡಲಾಗಿ 213 ಕೆಜಿ 600 ಗ್ರಾಂ ಆಗಿದ್ದು, ದೊರೆತ ಎಲ್ಲಾ ಗಾಂಜಾ ಗಿಡಗಳನ್ನು ಅಬಕಾರಿ ಇಲಾಖೆ ವಶಕ್ಕೆ ಪಡೆದುಕೊಂಡಿದೆ.

ಪ್ರಕರಣ ಪತ್ತೆ ಹಚ್ಚುವಲ್ಲಿ ಅರಣ್ಯ ಅಧಿಕಾರಿಗಳ ಸಿಬ್ಬಂದಿಗಳ ಕ್ರಮವನ್ನು ಅಬಕಾರಿ ಜಂಟಿ ಆಯುಕ್ತರು ಹಾಗೂ ಡಿಎಫ್‌ಒ ಶ್ಲಾಘಿಸಿದ್ದಾರೆ. ಪ್ರಕರಣವನ್ನು ದಯಾನಂದ ಸಿ.ಎಂ, ಅಬಕಾರಿ ನಿರೀಕ್ಷಕರು, ಕೊಳ್ಳೇಗಾಲ ವಲಯ ಅವರು ಪತ್ತೆ ಹಚ್ಚಿದ್ದು, ಉಪ ನಿರೀಕ್ಷಕಿ ನಂದಿನಿ ತನಿಖೆ ನಡೆಸುತ್ತಿದ್ದಾರೆ. ನೆಲ್ಲಿಕತ್ತಿ ಗ್ರಾಮದ ಐದು ಜನ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆ ಹಾಗೂ ಕಾನೂನು ಕ್ರಮಕ್ಕೆ ತನಿಖೆ ಮುಂದುವರೆದಿದೆ.

Tags:
error: Content is protected !!