Mysore
19
scattered clouds
Light
Dark

ಹನೂರಿನ ಮೊರಾರ್ಜಿ ದೇಸಾಯಿ ಮಾದರಿ ಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ

ಹನೂರು : ನನ್ನ ವೈಯಕ್ತಿಕ ಜೀವನದಲ್ಲಿ ಇದೊಂದು ಅಮೋಘ ದಿನವಾಗಲಿದೆ ಇಂತಹ ವಿದ್ಯಾರ್ಥಿಗಳನ್ನು ಪಡೆದ ನಾವೇ ಧನ್ಯರು ಎಂದು ನಂಜನಗೂಡು ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸೋಮಶೇಖರ್ ಹೇಳಿದರು.

ಪಟ್ಟಣದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ 2007ರ ಮೊದಲ ಎಸ್ಎಸ್ಎಲ್ಸಿ ಬ್ಯಾಚ್ ವತಿಯಿಂದ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದ ಆ ದಿನಗಳಲ್ಲಿ ನಮ್ಮ ವಿದ್ಯಾರ್ಥಿಗಳು ಪಟ್ಟಂತಹ ಕಷ್ಟ ಅಷ್ಟಿಷ್ಟಲ್ಲ. ಆ ದಿನಗಳು ಅತ್ಯಂತ ಕಷ್ಟ ಪಟ್ಟು ಈ ದಿನ ತಮ್ಮ ಕಾಲ ಮೇಲೆ ನಿಂತು. ನಮ್ಮನ್ನು ಸಹ ಗೌರವಿಸುವ ಕಾರ್ಯಕ್ರಮ ಮಾನವೀಯತೆ ಬೆಳೆಸಿಕೊಂಡಿದ್ದು ನಿಜಕ್ಕೂ ಸಂತೋಷದ ವಿಚಾರ ಎಂದರು.

ಶಿಕ್ಷಕ ಚಂದ್ರಶೇಖರ್ ಮೂರ್ತಿ ಮಾತನಾಡಿ, ಮೊರಾರ್ಜಿ ಶಾಲೆ ಪ್ರಾರಂಭದ ಅವಧಿಯಲ್ಲಿ ಸಾಕಷ್ಟು ಸೌಲಭ್ಯ ಕೊರತೆ ಇದ್ದರು ಸಹ ನಮ್ಮ ಮೊದಲ ಬ್ಯಾಚ್ ಮಕ್ಕಳು ಯಶಸ್ವಿ ಫಲಿತಾಂಶ ಕೊಟ್ಟರು ಜೊತೆಗೆ ಒಳ್ಳೆಯ ಗುಣ ಸಂಸ್ಕಾರ ಕಲಿತು ಇಂದು ನಮ್ಮನ್ನು ಗೌರವಿಸುವ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಅಭೂತ ಪೂರ್ವ ಹೂವಿನ ಸುರಿಮಳೆ : ಮೊದಲ ಬ್ಯಾಚ್ ನ ಮಕ್ಕಳು ತಮ್ಮ ಅವಧಿಯಲ್ಲಿ ತಮಗೆ ವಿದ್ಯಾದಾನ ಮಾಡಿದ ಹಾಗೂ ಅನ್ನದಾತರನ್ನು ಹೂವಿನ ಸುರಿಮಳೆ ಸುರಿಸುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಕರೆತಂದರು ಅಲ್ಲದೇ ಪ್ರಸ್ತುತ ಓದುತ್ತಿರುವ ಮಕ್ಕಳ ಬ್ಯಾoಡ್ ಸಹ ಅತ್ಯಂತ ರಮಣೀಯವಾಗಿತ್ತು.

ಭಾವುಕರಾದ ಶಿಕ್ಷಕರು ವಿದ್ಯಾರ್ಥಿಗಳು : ಹನೂರಿನಲ್ಲೇ ಮೊಟ್ಟ ಮೊದಲ ಬಾರಿಗೆ ಪ್ರಾರಂಭವಾದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ಮೊದಲ ಬ್ಯಾಚ್ ಮಕ್ಕಳು ಸುಮಾರು 18 ವರ್ಷಗಳ ನಂತರ ಮೊದಲ ಕಾರ್ಯಕ್ರಮ ಮಾಡುತ್ತಿದ್ದೂ ಎಲ್ಲರೂ ಮಾತನಾಡುವಾಗ ಭಾವುಕರಾದಂತಹ ಪ್ರಸಂಗ ಸಹ ಜರುಗಿತು. ಜೊತೆಗೆ ಹಳೆಯ ನೆನಪುಗಳನ್ನು ಮೆಲುಕು ಹಾಕಿ ಖುಷಿ ದುಃಖ ಹಂಚಿಕೊಂಡರು.

ಸನ್ಮಾನ ಕಾರ್ಯಕ್ರಮ : ಇಲ್ಲಿ ವಿಶೇಷ ವಾಗಿ ಪಾಠ ಪ್ರವಚನ ಮಾಡಿದ ಶಿಕ್ಷಕರ ಜೊತೆಯಲ್ಲಿ ಅಡುಗೆ ಸಿಬ್ಬಂದಿಗಳಿಗೂ ಸಹ ವಿಶೇಷವಾಗಿ ಸನ್ಮಾನ ಮಾಡಿ ಗುರುಗಳು ಹಾಗೂ ಅಡುಗೆ ಸಿಬ್ಬಂದಿಗಳನ್ನು ಹಳೆಯ ವಿದ್ಯಾರ್ಥಿಗಳು ನೆನೆದರು.

ಇದೆ ಸಂದರ್ಭದಲ್ಲಿ ಎಲ್ಲೂ ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಪ್ರಾರಂಭದ ದಿನಗಳಲ್ಲಿ ಇದ್ದಂತಹ ಶಿಕ್ಷಕರಾದ ಸತೀಶ್, ಚಂದ್ರು ಶೇಖರ್ ಮೂರ್ತಿ, ನೇತ್ರಾವತಿ, ಸೋಮಶೇಖರ್, ಮರಯ್ಯ, ಸುರೇಶ್, ಭಾಗ್ಯ, ಚಿಕ್ಕಸ್ವಾಮಿ,ಹಾಗೂ ಪ್ರಸ್ತುತ ಮೊರಾರ್ಜಿ ಶಾಲೆಯ ಪ್ರಾoಶುಪಾಲರಾದ ಪ್ರಕಾಶ್ ನಾಥನ್ ಹಾಗೂ ನಿಲಯ ಪಾಲಕ ಸೋಮಶೇಖರ್, ಶಿಕ್ಷಕರ ಬಳಗ ಹಾಗೂ ಎಲ್ಲ ಹಳೆಯ ವಿದ್ಯಾರ್ಥಿ ವಿದ್ಯಾರ್ಥಿ ನಿಯರು, ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು.