Mysore
30
few clouds

Social Media

ಮಂಗಳವಾರ, 27 ಜನವರಿ 2026
Light
Dark

ಗುಂಡ್ಲುಪೇಟೆ | ದನಗಾಹಿ ಮೇಲೆ ಹುಲಿ ದಾಳಿ ; ಪ್ರಾಣಾಪಾಯದಿಂದ ಪಾರು

ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ.

ಘಟನೆ ವಿವರ…
ತಾಲ್ಲೂಕಿನ ಕುಂದಕೆರೆ ಗ್ರಾಮದ ರೈತ ಮಲಿಯಪ್ಪ ಬಿನ್ ಮಹದೇವಪ್ಪ ಅವರ ಜಮೀನಿನಲ್ಲಿ ಜಾನುವಾರು ಮೇಯಿಸುವ ಸಂದರ್ಭದಲ್ಲಿ ಹಸುಗಳ ಮೇಲೆ ದಾಳಿ ನಡೆಸಲು ಹುಲಿ ಮುಗಿಬಿದ್ದಾಗ ಹುಲಿಯನ್ನು ಹಿಮ್ಮೆಟ್ಟಿಸಲು ಯತ್ನಿಸಿದ್ದಾರೆ. ಆಗ ಹುಲಿ ಇವರ ಮೇಲೆ ದಾಳಿಗೆ ಮುಂದಾಗಿದೆ. ತಕ್ಷಣ ರೈತ ಮಲಿಯಪ್ಪ ನೆಲಕ್ಕೆ ಕುಳಿತಿದ್ದಾರೆ ಹಾಗ ಹುಲಿಯ ಕಾಲುಗಳು ಕಣ್ಣಿನ ಸಮೀಪ ಮತ್ತು ತಲೆಗೆ ತಾಗಿದೆ ತಕ್ಷಣ ರೈತ ಓಡಿ ಗ್ರಾಮದ ಕಡೆ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ.

ಇದನ್ನು ಓಧಿ: ಏಕತಾ ಮಾಲ್‌ ನಿರ್ಮಾಣಕ್ಕೆ ಹೈಕೋರ್ಟ್ ತಡೆ‌

ಭಯಭೀತರಾದ ಜನ
ಕುಂದಕೆರೆ ಭಾಗದಲ್ಲಿ ಹುಲಿ ಇರುವ ವಿಚಾರವಾಗಿ ಅನೇಕ ಬಾರಿ ಕೂಂಬಿಂಗ್ ನಡೆಸುವಂತೆ ಹೇಳಿದ್ದರು. ಅರಣ್ಯ ಇಲಾಖೆ ಹುಲಿ ಸೆರೆ ಹಿಡಿಯುತ್ತಿಲ್ಲ. ಆಗಾಗಿ ರೈತಾಪಿ ವರ್ಗ ಜಮೀನುಗಳಲ್ಲಿ ಕೆಲಸ ಮಾಡಲು ಭಯಭೀತರಾಗಿದ್ದು, ಅರಣ್ಯ ಇಲಾಖೆ ಕೂಂಬಿಂಗ್ ನಡೆಸಿ ಹುಲಿ ಚಿರತೆಗಳ ಸೆರೆಗೆ ಬೋನ್ ಇರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಎರಡು ಗಂಟೆಯಾದರು ಬಾರದ ಆಂಬುಲೆನ್ಸ್, ಅರಣ್ಯ ಇಲಾಖೆ ಅಧಿಕಾರಿಗಳು:
ಹುಲಿ ದಾಳಿಯಾಗಿ ಎರಡು ಗಂಟೆಯಾಗಿದೆ ಎಂದು ಕರೆ ಮಾಡಿದರು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ. ಅಲ್ಲದೆ ಎರಡು ಗಂಟೆಯಾದರೂ ಅಂಬುಲೆನ್ಸ್ ಬಂದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.

Tags:
error: Content is protected !!