Mysore
24
haze

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ಗುಂಡ್ಲುಪೇಟೆ: ಶಾಲಾ ವಾಹನದಡಿ ಸಿಲುಕಿ ಬಾಲಕಿ ದಾರುಣ ಸಾವು

ಗುಂಡ್ಲುಪೇಟೆ/ಚಾಮರಾಜನಗರ: ಶಾಲಾ ವಾಹನದಿಂದ ಇಳಿದು ಹಿಂಬದಿ ನಿಂತಿದ್ದ 3 ವರ್ಷದ ಬಾಲಕಿ ಅದೇ ವಾಹನಕ್ಕೆ ಸಿಲುಕಿ   ಮೃತಪಟ್ಟ ದಾರುಣ ಘಟನೆ ಗುರುವಾರ ಗುಂಡ್ಲುಪೇಟೆಯ ಉಡಿಗಾಲ ಗ್ರಾಮದಲ್ಲಿ  ನಡೆದಿದೆ.

ತಾಲ್ಲೂಕಿನ ಕೋಡಸೋಗೆ ಗ್ರಾಮದ ಶಾಂತಪ್ಪ ಎಂಬುವರ ಮಗಳು ಅನ್ವಿತಾ (೪) ಮೃತಪಟ್ಟ ಬಾಲಕಿ.

ಘಟನೆ ವಿವರ: ಅನ್ವಿತಾ ಉಡಿಗಾಲದಲ್ಲಿರುವ ತಮ್ಮ ದೊಡ್ಡಪ್ಪನ ಮನೆಯಲ್ಲಿ ಉಳಿದುಕೊಂಡು ಅದೇ ಗ್ರಾಮದಲ್ಲಿರುವ ಚಂದನ ಕಾನ್ವೆಂಟ್‌ನಲ್ಲಿ ಪ್ರಿ ಕೆಜಿಗೆ ದಾಖಲಾಗಿದ್ದಳು. ಪ್ರತಿ ದಿನ ಮನೆಯಿಂದ ಶಾಲೆ ವಾಹನದಲ್ಲಿ ಹೋಗಿ ಬರುತ್ತಿದ್ದಳು. ಎಂದಿನಂತೆ ಚಾಲಕ ಮನೆ ಮುಂದೆ ವಾಹನ ನಿಲ್ಲಿಸಿ, ಇಳಿಸಿದ್ದಾನೆ.

ವಾಹನದಲ್ಲಿ ಚಾಲಕ ಹೊರತು ಪಡಿಸಿ, ಸಹಾಯಕರು ಇರಲಿಲ್ಲ. ಹೀಗಾಗಿ ಬಾಲಕಿ ಬಸ್‌ನಿಂದ ಇಳಿದು ಹಿಂಬದಿ ನಿಂತಿದ್ದಳು. ಇದನ್ನು ಗಮನಿಸದ ಚಾಲಕ ವಾಹನವನ್ನು ರಿವರ್ಸ್ ತೆಗೆಯಲು ಮುಂದಾದಾಗ ಬಾಲಕಿಗೆ ಡಿಕ್ಕಿ ಹೊಡೆದಿದೆ. ನೆಲಕ್ಕೆ ಬಿದ್ದ ಬಾಲಕಿಯ ತಲೆ ಮೇಲೆ ಚಕ್ರ ಹರಿದು ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟಿದ್ದಾರೆ.

ಸ್ಥಳದಲ್ಲಿಯೇ ಬಾಲಕಿಯ ಪೋಷಕರು ಹಾಗು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು, ಶಾಲೆಯ ಆಡಳಿತ ಮಂಡಳಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಖಾಸಗಿ ವಿದ್ಯಾ ಸಂಸ್ಥೆಗಳು ಶಾಲಾ ವಾಹನಗಳನ್ನು ಬಿಟ್ಟಿದ್ದು, ಯಾವುದೇ ರೀತಿ ಸುರಕ್ಷತೆ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಕಿಡಿಕಾರಿದರು.

ಖಾದಗಿ ಶಾಲೆಯ ವಾಹನಗಳ ವಿರುದ್ದ ಕ್ರಮ ತೆಗೆದುಕೊಳ್ಳಬೇಕು. ಪ್ರತಿ ಶಾಲಾ ವಾಹನದಲ್ಲಿ ಕಡ್ಡಾಯವಾಗಿ ಅನುಭವಿ ಚಾಲಕ, ಮತ್ತು ಸಹಾಯಕ ಇರುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಡಿವೈಎಸ್ಪಿ ಲಕ್ಷ್ಮಯ್ಯ, ಸರ್ಕಲ್ ಇನ್ಸ್ ಪೆಕ್ಟರ್ ಚಿಕ್ಕರಾಜಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Tags: