ಗುಂಡ್ಲುಪೇಟೆ : ಕ್ಷುಲ್ಲಕ ವಿಚಾರಕ್ಕೆ ಶುರುವಾದ ಸ್ನೇಹಿತರ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ.
ಪಟ್ಟಣದ ಹೊರವಲಯದ ಜೆಪಿ ಇನ್ ಸಮೀಪದಲ್ಲಿ ಇರುವ ಹಿಂದೂಸ್ತಾನ್ ಇಟ್ಟಿಗೆ ಪ್ಯಾಕ್ಟರಿಯ ವಾಸದ ಮನೆ ಮುಂಭಾಗ ಎಣ್ಣೆ ಪಾರ್ಟಿ ಮಾಡುತಿದ್ದ ಸ್ನೇಹಿತರ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದು ಲಾಂಗ್ ನಿಂದ ಸ್ನೇಹಿತರೇ ಹೊಡೆದು ಪೈಜಲ್ ( 47) ಎಂಬ ಕೊಲೆ ಮಾಡಿದ್ದಾರೆ.
ಇದನ್ನೂ ಓದಿ:-ಗುಂಡ್ಲುಪೇಟೆ | ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತರ ನಡುವೆ ಗಲಾಟೆ ; ಕೊಲೆಯಲ್ಲಿ ಅಂತ್ಯ
ಮಂಗಳವಾರ ರಾತ್ರಿ ಮೃತ ಪೈಜಲ್ ಅತನ ಸ್ನೇಹಿತರಾದ ಕುಟ್ಟಿಪ್ಪಾ, ಜೊತೆ ಗುಂಡ್ಲುಪೇಟೆ ಪಟ್ಟಣಕ್ಕೆ ಹೋಗುತ್ತೇನೆಂದು ತೆರಳಿದ್ದು ಅಲ್ಲಿಂದ ಸ್ನೇಹಿತರಾದ ಸೋಮೇಶ್, ಮಣಿವಣ್ಣನ್@ ರಂಜಿತ್, ರಘುರಾಮ್ ಜೊತೆ ಸೊಮೇಶ್ ಇದ್ದ ಜಾಗಕ್ಕೆ ಪಾರ್ಟಿಮಾಡಲು ತೆರಳಿದ್ದಾರೆ. ಈ ಸಂದರ್ಭದಲ್ಲಿ ಮಣಿವಣ್ಣನ್ ಸೊಮೆಶನ ಕಾರನ್ನು ಮಾರಾಟಕ್ಕೆ ಕೊಡು ಎಂದು ಕೇಳಿದ್ದಾನೆ. ಇದಕ್ಕೆ ಪೈಜಲ್ ಸೊಮೇಶ್ ನ ಕಾರು ಯಾವುದೋ ಕೇಸ್ ಗೆ ಪಿಟ್ ಹಾಗಿದೆ ನೋಡಿಕೊಂಡು ತೆಗೆದುಕೊ ಎಂದಿದ್ದಾನೆ. ಇದಕ್ಕೆ ಸ್ನೆಹಿತನಾಗಿ ನನ್ನ ಕಾರಿನ ವ್ಯಾಪಾರದ ಬಗ್ಗೆ ತಕರಾರು ಮಾಡುತ್ತೀಯ ಎಂದು ಆಗ ಸೊಮೇಶ್ ಹೊಡೆದಿದ್ದಾನೆ ಮಣಿವಣ್ಣನ್ ಲಾಂಗ್ ನಿಂದ ತಲೆ ಕತ್ತಿಗೆ ಹಲ್ಲೆ ಮಾಡಿದಾಗ ತಿವ್ರ ರಕ್ತಸ್ರಾವವಾಗಿದೆ ತಕ್ಷಣ ಕಾರಿನಲ್ಲಿ ಅವರೇ ಸರ್ಕಾರಿ ಅಸ್ಪತ್ರೆಗೆ ಕರೆತಂದಿದ್ದಾರೆ ಆದರೆ ಪೈಜಲ್ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಎಲ್ಲಾ ಆರೋಪಿಗಳು ತಮಿಳುನಾಡಿನ ಮೂಲದವರಾಗಿದ್ದು ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋಮೇಶ್, ಮಣಿವಣ್ಣನ್, ರಘುರಾಮ್ ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.





