Mysore
18
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಗೋಪಾಲಸ್ವಾಮಿ ಬೆಟ್ಟದಲ್ಲಿ ಶೂಟಿಂಗ್‌ ಪ್ರಕರಣ : ಅಧಿಕಾರಗಳ ವಿರುದ್ದ ಸೂಕ್ತ ಕ್ರಮಕ್ಕೆ ಸಿಎಂ ಗೆ ಮನವಿ

ಹನೂರು: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಲೆಯಾಳಿ ಸಿನಿಮಾ ಶೂಟಿಂಗ್ (Gopalaswamy Betta film shooting) ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ವಹಿಸಬೇಕು ಎಂದು ಸ್ಥಳೀಯ ರೈತ ಮುಖಂಡರುಗಳು ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ದೂರು ನೀಡಿದರು.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಅರಣ್ಯ ನಿಯಮವನ್ನು ಗಾಳಿಗೆ ತೂರಿ ಮಲೆಯಾಳಿ ಸಿನಿಮಾದ ಚಿತ್ರೀಕರಣಕ್ಕೆ ಅಕ್ರಮವಾಗಿ ಅಧಿಕಾರಿಗಳೆ ಅನುಮತಿ ನೀಡಿದ್ದಾರೆ. ಹಾಗಾಗಿ ಕೂಡಲೇ ಅರಣ್ಯ ಇಲಾಖೆ ನೀತಿ ನಿಯಮ ಗಾಳಿಗೆ ತೂರಿದ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಎಂದು ಸಿ‌ಎಂಸಿದ್ದರಾಮಯ್ಯರವರಿಗೆ ದೂರು ನೀಡಿದರು.

ಇದಲ್ಲದೆ ಚಾಮರಾಜನಗರ ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಮಿತಿಮೀರಿದ್ದು ಮಾನವ ಸಂಘರ್ಷ ಮಿತಿಮೀರಿದ ಹಾಗಾಗಿ ಸಂಪುಟ ಸಭೆಯ ವೇಳೆ ಕ್ರಮಕೈಗೊಳ್ಳುವಂತೆ ರೈತ ಮುಖಂಡರು ಒತ್ತಾಯಿಸಿದರು.

ಆನ್ಲೈನ್ ಗೇಮ್ ನಿಷೇಧಿಸಿ: ಇಂದಿನ ಯುವ ಪೀಳಿಗೆ ಮೊಬೈಲ್ ನಲ್ಲಿನ ಆನ್ಲೈನ್ ಗೇಮ್ ಗಳ ಕಡೆ ಹೆಚ್ಚಿನ ಗಮನ ವಹಿಸಿರುವುದರಿಂದ ಬೆಟ್ಟಿಂಗ್ ದಂಧೆಗೆ ಸಿಲುಕಿಕೊಂಡು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಆದ್ದರಿಂದ ಆನ್ಲೈನ್ ಗೇಮ್ ನಿಷೇಧ ಮಾಡಬೇಕು ಎಂದು ಒತ್ತಾಯಿಸಿದರು.

Tags:
error: Content is protected !!