ಹನೂರು : ತಾಲ್ಲೂಕಿನ ಕೌದಳ್ಳಿ ಭದ್ರಯ್ಯನಹಳ್ಳಿ ಮಾರ್ಗ ಮಧ್ಯದ ನಡುವೆ ಗೂಡ್ಸ್ ವಾಹನ ಒಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಹಳ್ಳಕ್ಕೆ ಪಲ್ಟಿಯಾಗಿರುವ ಘಟನೆ ನಡೆದಿದೆ.
ಮಹೇಂದ್ರ ಕಂಪೆನಿಯ ಗೂಡ್ಸ್ ವಾಹನವು ಕೌದಳ್ಳಿ ಮಾರ್ಗದಿಂದ ಭದ್ರಯನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದಾಗ ಚಾಲಕ ಪುಟ್ಟಮಾದಶೆಟ್ಟಿ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ವಾಹನ ಹಳ್ಳಕ್ಕೆ ಪಲ್ಟಿಯಾಗಿದೆ.
ವಿದ್ಯುತ್ ಕಂಬಕ್ಕೆ ರಭಸವಾಗಿ ಗುದ್ದಿದ ಹಿನ್ನೆಲೆ ವಿದ್ಯುತ್ ಕಂಬ ಸಂಪೂರ್ಣವಾಗಿ ಜಖಂಗೊಂಡಿದ್ದು ತಾತ್ಕಾಲಿಕವಾಗಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಚಾಲಕ ಪುಟ್ಟಮಾದ ಶೆಟ್ಟಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.





