ಹನೂರು : ತಾಲ್ಲೂಕಿನ ಕೆ.ಗುಂಡಾಪುರ ಗ್ರಾಮದಲ್ಲಿ ಚಿರತೆಯೊಂದು ಜಮೀನಿಗೆ ಲಗ್ಗೆ ಇಟ್ಟು ಮೇವು ಮೇಯುತ್ತಿದ್ದ ಮೇಕೆಯೊಂದನ್ನು ಕೊಂದುಹಾಕಿದೆ.
ಕೆ.ಗುಂಡಾಪುರ ಗ್ರಾಮದ ಭಾಸ್ಕರ್ ಎಂಬವರ ಜಮೀನಿನಲ್ಲಿ ಈ ಘಟನೆ ಸಂಭವಿಸಿದ್ದು, ಅರಣ್ಯದಿಂದ ಹೊರಬಂದ ಚಿರತೆಯೊಂದು ಜಮೀನಿಗೆ ನುಗ್ಗಿ, ಅಲ್ಲಿ ಮೇಯುತ್ತಿದ್ದ ಮೇಕೆಯ ಮೇಲೆ ಏಕಾಏಕಿ ದಾಳಿ ನಡೆಸಿದ ಪರಿಣಾಮ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದೆ.
ದಾಳಿಯ ವೇಳೆ ಮೇಕೆಯ ಪಾಲಕರಾದ ನಾಗಣ್ಣ ಅವರು ಸಮೀಪದಲ್ಲೇ ಇದ್ದು, ಕಿರುಚಿಕೊಂಡು ಚಿರತೆಯನ್ನು ಓಡಿಸಲು ಯತ್ನಿಸಿದಾಗ ಚಿರತೆ ಅಲ್ಲಿಂದ ಓಡಿ ಹೋಗಿದೆ. ಈ ಘಟನೆಯಿಂದ ಆತಂಕಗೊಂಡ ಗ್ರಾಮಸ್ಥರು ಸಂಬಂಧಪಟ್ಟ ಅರಣ್ಯಾಧಿಕಾರಿಗಳು ತಕ್ಷಣ ಚಿರತೆ ಉಪಟಳಕ್ಕೆ ತಕ್ಷಣ ಕಡಿವಾಣ ಹಾಕಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೆ, ಮೇಕೆಯ ಪಾಲಕರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.





