ಹನೂರು : ತಾಲ್ಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಸ್ತೂರು ಸಮೀಪದ ಪಟ್ಟ ಜಮೀನಿನಲ್ಲಿ ಮೇಯುತ್ತಿದ್ದ ಮೇಕೆಯ ಮೇಲೆ ಚಿರತೆ ದಾಳಿ ನಡೆಸಿ ಕೊಂದಿರುವ ಘಟನೆ ನಡೆದಿದೆ.
ತಾಲ್ಲೂಕಿನ ಅಸ್ತೂರು ಗ್ರಾಮದ ವೆಂಕಟರಾಜು ಎಂಬವರು ತಮ್ಮ ಮೇಕೆಗಳನ್ನು ಅರಣ್ಯದಂಚಿನ ಜಮೀನಿನಲ್ಲಿ ಮೇಯಿಸುತ್ತಿದ್ದಾಗ ಏಕಾಏಕಿ ಚಿರತೆಯೊಂದು ಗರ್ಭಿಣಿ ಮೇಕೆಯ ಮೇಲೆ ದಾಳಿ ನಡೆಸಿದೆ. ಈ ಸಂಬಂಧ ರೈತ ವೆಂಕಟರಾಜು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇನ್ನು ೧೫ ದಿನಗಳಲ್ಲಿ ಮರಿಗಳನ್ನು ಹಾಕುತ್ತಿತ್ತು. ಇದೀಗ ಚಿರತೆ ದಾಳಿಗೆ ಮೇಕೆ ಮೃತಪಟ್ಟಿರುವುದರಿಂದ ಸುಮಾರು ೨೦ ಸಾವಿರಕ್ಕೂ ಹೆಚ್ಚು ನಷ್ಟವಾಗಿದೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಮೇಕೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ನೊಂದ ರೈತ ವೆಂಕಟರಾಜು ಮನವಿ ಮಾಡಿದ್ದಾರೆ.





