Mysore
20
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಮಠಾಧೀಶರನ್ನಾಗಿ ಮಾಡಲು ಕರೆತಂದಿದ್ದ ವ್ಯಕ್ತಿಗೆ ಗೇಟ್‌ಪಾಸ್

Gatepass for the person who was brought in to be the abbot

ದಾಖಲಾತಿಗಳಲ್ಲಿ ಮುಸ್ಲಿಂ ವ್ಯಕ್ತಿ ಎಂಬುದನ್ನು ತಿಳಿದು ಹೌಹಾರಿ, ವಾಪಸ್ ಕಳಿಸಿದ ಗ್ರಾಮಸ್ಥರು

ಗುಂಡ್ಲುಪೇಟೆ : ತಾಲ್ಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗುರುಮಲ್ಲೇಶ್ವರ ವಿರಕ್ತ ಮಠಕ್ಕೆ ಯಾದಗಿರಿ ಜಿಲ್ಲೆ ಸಹಪುರ ಗ್ರಾಮದ ನಿಜಲಿಂಗ ಸ್ವಾಮೀಜಿ ಎಂಬ ಹೆಸರಿನ ಸ್ವಾಮೀಜಿಯವರನ್ನು ಕರೆತರಲಾಗಿತ್ತು.

ಆದರೆ ಅವರ ದಾಖಲಾತಿ ಪರಿಶೀಲಿಸಿದಾಗ ಆಧಾರ್ ಕಾರ್ಡ್, ಅಂಕಪಟ್ಟಿ, ಪ್ಯಾನ್‌ಕಾರ್ಡ್‌ಗಳಲ್ಲಿ ಅವರ ಹೆಸರು ಮಹಮ್ಮದ್ ನಿಸಾರ್ ಎಂದು ಮುಸ್ಲಿಂ ವ್ಯಕ್ತಿಯ ಹೆಸರಿನಲ್ಲಿ ಇದ್ದುದನ್ನು ಕಂಡ ಗ್ರಾಮಸ್ಥರು ಹೌಹಾರಿದ್ದಾರೆ.

ಈ ಬಗ್ಗೆ ವಿಚಾರಿಸಿದಾಗ, ಅವರು ನಾನು ಮುಸ್ಲಿಂ ಆಗಿದ್ದೆ. ನಂತರ ಲಿಂಗದೀಕ್ಷೆ ಪಡೆದಿದ್ದೇನೆ ಎಂದು ತಿಳಿಸಿದ್ದಾರೆ. ಆದರೆ, ಗ್ರಾಮಸ್ಥರು ಮತ್ತು ಮಠವನ್ನು ನಿರ್ಮಾಣ ಮಾಡಿದವರು ಇದಕ್ಕೆ ಒಪ್ಪದೆ ನಿಸಾರ್ ಅವರನ್ನು ಮೂಲ ಸ್ಥಳಕ್ಕೆ ವಾಪಸ್ ಕಳಿಸಿದ್ದಾರೆ.

ವಿಶ್ವಗುರು ಬಸವಣ್ಣನವರ ತತ್ವ ಚಿಂತನೆಗಳ ಪ್ರಭಾವಕ್ಕೆ ಒಳಗಾದ ಮುಸ್ಲಿಂ ಸಮುದಾಯದ ಮಹಮ್ಮದ್ ನಿಸಾರ್ ಜಂಗಮ ದೀಕ್ಷೆ ಪಡೆದು ಬಸವ ತತ್ವ ಪ್ರಚಾರಕ್ಕಾಗಿ ಜೀವನ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

ಅನ್ಯ ಧರ್ಮೀಯ ವ್ಯಕ್ತಿ ಕೆಲವು ವರ್ಷಗಳ ಹಿಂದೆ ಲಿಂಗದೀಕ್ಷೆ ಪಡೆದ ತಕ್ಷಣ ಅವರನ್ನು ಮಠದ ಪೀಠಾಧಿಪತಿ ಎಂದು ಒಪ್ಪಲು ಸಾಧ್ಯವಿಲ್ಲ. ಅಲ್ಲದೆ ಆಕ್ಷೇಪ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅವರನ್ನು ಮಠದಿಂದ ವಾಪಸ್ ಕಳಿಸಲಾಗಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದರು.

Tags:
error: Content is protected !!