ಕೊಳ್ಳೇಗಾಲ : ಬೈಕ್‌ನಲ್ಲಿ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಸ್ತೀಪುರ ಹೊರವಲಯದಲ್ಲಿ ಖಚಿತ ಮಾಹಿತಿ ಮೇರೆಗೆ ಅರೇಪಾಳ್ಯ ಕಡೆಯಿಂದ ಕೊಳ್ಳೇಗಾಲಕ್ಕೆ ಬೈಕ್‌ನಲ್ಲಿ ಬರುತ್ತಿದ್ದ ಬಸ್ತೀಪುರ ಕುಮಾರ್ ಎಂಬಾತನನ್ನು ತಪಾಸಣೆಗೆ ಒಳಪಡಿಸಿದಾಗ ೩೬೦ ಗ್ರಾಂ ಒಣ ಗಾಂಜಾ ಪತ್ತೆಯಾಗಿದೆ.
ಆರೋಪಿಯನ್ನು ಬಂಧಿಸಿ ಗಾಂಜಾ ಹಾಗೂ ಸಾಗಣೆಗೆ ಬಳಸಿದ್ದ ಬೈಕ್ ಅನ್ನು ಜಪ್ತಿ ಮಾಡಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ದಾಳಿಯಲ್ಲಿ ಟೌನ್ ಪಿಎಸ್‌ಐ ವರ್ಷ, ಡಿವೈಎಸ್ಪಿ ಅಪರಾಧ ಪತ್ತೆದಳದ ಎಎಸ್‌ಐ ತಖೀವುಲ್ಲಾ, ಮುಖ್ಯಪೇದೆ ವೆಂಕಟೇಶ್, ಪೇದೆ ಬಿಳಿಗೌಡ, ಪಟ್ಟಣ ಪೊಲೀಸ್ ಠಾಣೆಯ ಸಿಬ್ಬಂದಿ ಭಾಗವಹಿಸಿದ್ದರು.





