Mysore
29
haze

Social Media

ಸೋಮವಾರ, 02 ಮಾರ್ಚ್ 2026
Light
Dark

ಹನೂರು| ಗ್ಯಾಸ್‌ ಸಿಲಿಂಡರ್‌ ಸೋರಿಕೆಯಿಂದ ಕಾಣಿಸಿಕೊಂಡ ಬೆಂಕಿ: ಅಡುಗೆ ಸಾಮಗ್ರಿಗಳು ಭಸ್ಮ

Fire Breaks Out Due to Gas Cylinder Leak; Cooking Items Destroyed

ಹನೂರು: ಗೃಹಬಳಕೆಯ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡು ಅಪಾರ ಪ್ರಮಾಣದ ಸಾಮಗ್ರಿಗಳು ಸುಟ್ಟು ಭಸ್ಮವಾಗಿರುವ ಘಟನೆ ಹನೂರು ತಾಲ್ಲೂಕಿನ ಮಂಗಲ ಗ್ರಾಮದಲ್ಲಿ ಜರುಗಿದೆ.

ಮಂಗಲ ಗ್ರಾಮದ ಗುರುಮಲ್ಲ ಆರಾಧ್ಯ ಎಂಬುವವರ ಮನೆಯಲ್ಲಿ ಇಂದು ಬೆಳಿಗ್ಗೆ ಸಿಲಿಂಡರ್‌ನಲ್ಲಿ ಏಕಾಏಕಿ ಸೋರಿಕೆಯಾಗಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಅಡುಗೆ ಮನೆಯ ಸಾಮಗ್ರಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ತಕ್ಷಣ ಗುರುಮಲ್ಲ ಆರಾಧ್ಯರವರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಮುಂದೆ ಆಗಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.

Tags:
error: Content is protected !!