Mysore
28
scattered clouds

Social Media

ಭಾನುವಾರ, 25 ಜನವರಿ 2026
Light
Dark

ಬಿಜೆಪಿಯಿಂದ 10 ಮಂದಿ ನಗರಸಭೆ ಸದಸ್ಯರ ಉಚ್ಛಾಟನೆ

ಕೊಳ್ಳೇಗಾಲ : ಬಿಜೆಪಿಯಿಂದ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದ 10 ಮಂದಿಯನ್ನು ಮತ್ತು ಚಾ.ನಗರ ನಗರಸಭೆಯ ಓರ್ವ ಸದಸ್ಯರನ್ನು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪದ ಮೇರೆಗೆ ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಿ ಬಿಜೆಪಿ ಜಿಲ್ಲಾ ಕಾರ್ಯಕಾರಿ ಸಮಿತಿ ಆದೇಶದ ಮೇರೆಗೆ ಜಿಲ್ಲಾಧ್ಯಕ್ಷ ನಿರಂಜನ್ ಕುಮಾರ್ ಉಚ್ಚಾಟಿಸಿ ಆದೇಶಿಸಿದ್ದಾರೆ.

ನಿರಂತರವಾಗಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿ ಕಾಂಗ್ರೆಸ್ ಪಕ್ಷದ ಜೊತೆ ಕೈಜೋಡಿಸಿದ್ದರಿಂದ ಈ ಕ್ರಮಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:-ಕಲಬುರಗಿ ಸೇರಿ ಉತ್ತರದ ಜಿಲ್ಲೆಗಳಲ್ಲಿ ನೆರೆ ಹಾವಳಿ; ಉಸ್ತುವಾರಿ ಸಚಿವರ ವಿರುದ್ಧ ಜೆಡಿಎಸ್ ಕಿಡಿ

ಉಚ್ಚಾಟನೆಗೊಂಡ ಸದಸ್ಯರು
ನಗರಸಭೆ ೧೦ನೇ ವಾರ್ಡ್ ನ ಜಿ.ಪಿ.ಶಿವಕುಮಾರ್, ೯ನೇ ವಾರ್ಡ್‌ನ ನಾಗೇಂದ್ರ, ೫ ನೇ ವಾರ್ಡ್‌ನ ಧರಣೇಶ್, ೨೧ನೇ ವಾರ್ಡ್‌ನ ಪ್ರಕಾಶ್, ೨೫ನೇ ವಾರ್ಡ್‌ನ ರಾಮಕೃಷ್ಣ, ೭ನೇ ವಾರ್ಡ್‌ನ ನಾಸೀರ್ ಷರೀ-, ೬ನೇ ವಾರ್ಡ್‌ನ ಮಾನಸ ಪ್ರಭುಸ್ವಾಮಿ, ೧೩ನೇ ವಾರ್ಡ್‌ನ ಪವಿತ್ರ ರಮೇಶ್, ೨೬ನೇ ವಾರ್ಡ್‌ನ ನಾಗಸುಂದ್ರಮ್ಮ, ೮ನೇ ವಾರ್ಡ್‌ನ ಕವಿತಾ.
ಚಾ.ನಗರ ನಗರಸಭೆಯ ಸದಸ್ಯ ಮಹದೇವಯ್ಯ ಅವರನ್ನೂ ಪಕ್ಷದಿಂದ ಉಚ್ಚಾಟಿಸಲಾಗಿದೆ.

Tags:
error: Content is protected !!